ಮಲ್ಲದಗುಡ್ಡದಲ್ಲಿ ಜೀವಜಲ ಸಮಸ್ಯೆ

ಮಲ್ಲದಗುಡ್ಡದ ಒಂದನೇ ವಾರ್ಡಿನ ನಿವಾಸಿಗಳು ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮಲ್ಲದಗುಡ್ಡದ ಒಂದನೇ ವಾರ್ಡಿನ ನಿವಾಸಿಗಳು ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
Published on

ಕವಿತಾಳ: ಮಲ್ಲದಗುಡ್ಡ ಒಂದನೇ ವಾರ್ಡ್ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮದಲ್ಲಿ ಪಂಚಾಯಿತಿ ಇದ್ದೂ ಇಲ್ಲದಂತಾಗಿದೆ ಎಂಬುದು ವಾರ್ಡ್ ನಿವಾಸಿಗಳ ಆರೋಪವಾಗಿದೆ.

ಕಳೆದ 15 ದಿನದಿಂದ ವಾರ್ಡ್‌ನಲ್ಲಿ ನೀರು ಪೂರೈಕೆಯಾಗಿಲ್ಲ. ಇದರಿಂದಾಗಿ ಸಾರ್ವಜನಿಕರು ಟ್ಯಾಂಕರ್ ನೀರು ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಗ್ರಾಮದ ಮೂರು ಕೊಳವೆಬಾವಿ ಮುಖಾಂತರ ದಿನ್ನಿ ಕ್ಯಾಂಪ್, ಮಲ್ಲದಗುಡ್ಡ ಕ್ಯಾಂಪ್, ಡೊಣಮರಡಿ ಸೇರಿದಂತೆ ಹಲವು ಗ್ರಾಮಗಳಿಗೆ ನೀರನ್ನು ಪೂರೈಸಲಾಗುತ್ತದೆ. ಆದರೆ, ನಮ್ಮ ಗ್ರಾಮದಲ್ಲಿ ನೀರಿಲ್ಲದ ಪರಿಸ್ಥಿತಿ ಇದೆ. ನೀರಿನ ಸಮಸ್ಯೆ ಹೇಳಲು ಹೋದರೆ ಪಿಡಿಒ ಕಚೇರಿಯಲ್ಲಿರುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಇದರಿಂದಾಗಿ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಯಲ್ಲಪ್ಪ ನಾಯಕ, ಚನ್ನಬಸವ, ಅಂಬಮ್ಮ, ಹಂಪಮ್ಮ ಕಾಗಲು, ರಾಜಮ್ಮ, ಪಾರ್ವತಮ್ಮ, ಅಮರಮ್ಮ, ರೇಣುಕಮ್ಮ, ಹುಸೇನಬಿ, ಆದಮ್ಮ, ಈರಮ್ಮ, ರಮೇಶ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net