ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ

ದೇವದುರ್ಗ ತಾಲೂಕು ಹೂವಿನಹೆಡಗಿ ಸೇತುವೆಗಿಂತ ಕೆಳಮಟ್ಟದಲ್ಲಿ ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿರುವುದು.
ದೇವದುರ್ಗ ತಾಲೂಕು ಹೂವಿನಹೆಡಗಿ ಸೇತುವೆಗಿಂತ ಕೆಳಮಟ್ಟದಲ್ಲಿ ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿರುವುದು.
Published on

ನಾರಾಯಣಪುರ ಜಲಾಶಯಕ್ಕೆ ಒಳಹರಿವು ಇಳಿಕೆಯಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಇದರಿಂದ ಕಳೆದ 15 ದಿನಗಳಿಂದ ನೆರೆ ಆತಂಕ ಎದುರಿಸುತ್ತಿದ್ದ ನದಿದಂಡೆ ಗ್ರಾಮದ ರೈತರು, ಗ್ರಾಮಸ್ಥರು ನಿರಾಳರಾಗಿದ್ದಾರೆ.

ನದಿಯಲ್ಲಿ ಸೋಮವಾರ 80ಸಾವಿರ ಕ್ಯೂಸೆಕ್ ಇದ್ದ ನೀರಿನ ಪ್ರಮಾಣ ಮಂಗಳವಾರ 50ಸಾವಿರ, ಬುಧವಾರ 25ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿತ್ತು. ಬುಧವಾರ ಸಂಜೆ ನಾರಾಯಣಪುರ ಡ್ಯಾಂನಲ್ಲಿ ಒಳಹರಿವು ಪ್ರಮಾಣ 20ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿತ್ತು. ಇದರಿಂದ ನದಿಗೆ ಹರಿಸುವ ನೀರಿನ ಪ್ರಮಾಣ 16960 ಕ್ಯೂಸೆಕ್‌ಗೆ ತಗ್ಗಿಸಲಾಗಿದೆ. ಹೀಗಾಗಿ ಮುಳುಗಡೆಯಾಗಿದ್ದ ಹೂವಿನಹೆಡಗಿಯ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಗೋಚರಿಸುತ್ತಿದೆ.
33.31 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ನಾರಾಯಣಪುರ ಜಲಾಶಯದಲ್ಲಿ ಸದ್ಯ 33.27ಟಿಎಂಸಿ ನೀರಿದೆ. ಇನ್ನು 123 ಟಿಎಂಸಿ ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ ಕೊನೇ ವಾರದಲ್ಲಿ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದ್ದು, ಆಗಸ್ಟ್ ಮೊದಲ ವಾರ ಈ ಪ್ರಮಾಣ 1.5ಲಕ್ಷ ಕ್ಯೂಸೆಕ್‌ವರೆಗೆ ಹೆಚ್ಚಿತ್ತು. ಇದರಿಂದಾಗಿ ಹೂವಿನಹೆಡಗಿ ಗ್ರಾಮದ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿತ್ತು. ಕೊಪ್ಪರದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಗೂಗಲ್ ಶ್ರೀ ಅಲ್ಲಮಪ್ರಭು ದೇವಸ್ಥಾನದ ಮೆಟ್ಟಿಲುವರೆಗೆ ನೀರು ಬಂದಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net