ಜಾಗೃತಿ ಜಾಥಾ ತಾಲೂಕು ಆಡಳಿತ ಸೌಧದಿಂದ ಕೆಇಬಿ ರಸ್ತೆ, ಜೆಪಿ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ಡಾ.ಅಂಬೇಡ್ಕರ್ ವೃತ್ತದವರೆಗೆ ನಡೆಯಿತು. ನೂರಾರು ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು. ತಾಪಂ ಇಒ ಕೆ.ರಾಜೇಂದ್ರಕುಮಾರ, ಟಿಎಚ್‌ಒ ಬನದೇಶ್ವರ, ತಾಪಂ ಎಡಿ ಅಣ್ಣರಾವ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಇತರರಿದ್ದರು.