ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭ

ಜಿಲ್ಲಾಧಿಕಾರಿ ಪೂವಿತಾ.ಎಸ್.
ಜಿಲ್ಲಾಧಿಕಾರಿ ಪೂವಿತಾ.ಎಸ್.
Published on

ಪ್ರಮುಖ ಮುಖ್ಯಾಂಶಗಳು

  • ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭ
  • ಬಿಎಲ್‌ಗಳಿಂದ ಮನೆ ಮನೆಗೆ ಭೇಟಿ ; ಅರ್ಜಿ ಸ್ವೀಕಾರ
  • ಜೂ. 30 ರಿಂದ ಜು.29ವರೆಗೆ ಬಿಎಲ್‌ಓಗಳು ಮನೆ ಮನೆಗೆ ಭೇಟಿ
ರಾಯಚೂರು ಜಿಲ್ಲೆಯಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಿದ್ದು ಜೂ. 30 ರಿಂದ ಜು.29ವರೆಗೆ ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮಸ್ ದ್ವಿ ಪತ್ರಿಯನ್ನು ನೀಡುತ್ತಿದ್ದು 2025 ಮತದಾರರ ಪಟ್ಟಿಯಲ್ಲಿರುವವರು ಅರ್ಜಿಗಳನ್ನು ಭರ್ತಿ ಮಾಡಿ ಒಂದು ಪ್ರತಿಯನ್ನು ಕಾಯ್ದಿರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪೂವಿತಾ.ಎಸ್. ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು 2025 ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಮಾಡಿ ನೈಜ ಮತದಾರರನ್ನು ಗುರುತಿಸಲಾಗುತ್ತದೆ. ಮೃತಪಟ್ಟವರು, ಎರಡು ಮತಗಟ್ಟೆಯಲ್ಲಿ ಹೆಸರು ಇರುವವರು, ವಲಸೆ ಹೋದವರನ್ನು ಗುರುತಿಸಲಾಗುತ್ತದೆ. ಯಾರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವದಿಲ್ಲ. ಮನೆ ಮನೆಗೆ ಬಿಎಲ್‌ಓಗಳು ಭೇಟಿ ನೀಡಿದಾಗ ಪ್ರತಿಯೊಬ್ಬ ಮತದಾರರು ಸ್ವಯಂ ಧೃಡೀಕರಣ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಸ್ವೀಕೃತಿ ರಸೀದಿ ಪಡೆಯಬೇಕು. ಚುನಾವಣಾ ಆಯೋಗ ಗುರುತಿಸಿರುವ 12 ದಾಖಲೆಗಳ ಆಧಾರದ ಮೇಲೆ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುತ್ತದೆ. ವಿದೇಶಿ ಪೌರತ್ವ ಪಡೆದವರ ಕುಟುಂಬ ವರ್ಗದವರು ಸ್ಪಷ್ಟ ಮಾಹಿತಿ ಒದಗಿಸಬೇಕು. ಸುಳ್ಳು ಮಾಹಿತಿ ಒದಗಿಸದಲ್ಲಿ ಕಾನೂನಿನ್ವಯ ಕ್ರಮಕೈಗೊಳ್ಳಲಾಗುತ್ತದೆ. ಯಾರನ್ನು ಏಕಾಎಕಿ ಮತದಾರರ ಪಟ್ಟಿಯಿಂದ ಕೈ ಬಿಡುವದಿಲ್ಲ. ಎನ್ಯುಮರೇಷನ್ ಫಾರ್ಮ್ ನೀಡದೇ ಇರುವ ಮತದಾರರ ಹೆಸರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವದಿಲ್ಲ ಎಂದು ತಿಳಿಸಿದರು.
ಮತದಾರ ಪಟ್ಟಿಯಲ್ಲಿ ಹೆಸರಿನ ಕಾಗುಣಿತ, ವಿಳಾಸದ ಬದಲಾವಣೆ, ಮತಗಟ್ಟೆ ಹಂಚಿಕೆ, ಗುರುತೀನ ಚೀಟಿ ಪೋಟೋ ಬದಲಾವಣೆ ಸೇರಿದಂತೆ ಯಾವುದೇ ತಾಂತ್ರಿಕ ದೋಷಗಳಿದ್ದರೆ ಬಿಎಲ್‌ಓಗಳಿಗೆ ಆಕ್ಷೇಪಣೆ ಸಲ್ಲಿಸಬಹುದು. ವಿಶೇಷ ಸಮಗ್ರ ಮತದಾರರ ಪರಿಷ್ಕರಣೆಯ ಕರಡು ಮತದಾರರ ಪಟ್ಟಿಯನು ಅಕ್ಟೋಬರ್ 7 ರಂದು ಪ್ರಕಟಿಸಲಾಗುತ್ತದೆ.
ನಿಖರವಾದ ದಾಖಲೆಗಳೊಂದಿಗೆ ಪ್ರಮಾಣಪತ್ರ ನೀಡಿದಲ್ಲಿ ಬದಲಾವಣೆ ಸಾಧ್ಯವಿದೆಎಂದರು. ಆಕ್ಷೇಪಣೆಗಳನ್ನು ಸಲ್ಲಿಸಿದ ವ್ಯಕ್ತಿಗಳಿಗೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳು ದೂರುಗಳಸಲ್ಲಿಕೆಯಾದರೆ ಪರಿಶೀಲಿಸಿ ಅಗತ್ಯ ವಿಚಾರಣೆ ನಡೆಸಿ ಮತದಾರರ ಪಟ್ಟಿಯಲ್ಲಿ ಸೇರಿಸುವ ಕುರಿತುನಿರ್ಧಾರ ಕೈಗೊಳ್ಳುತ್ತಾರೆ. ಹೊಸ ಮತದಾರರು ಫಾರ್ಮ -6 ನೊಂದಿಗೆ ನಿಗಧಿತ ಘೋಷಣಾ ಮತ್ರ ಸಲ್ಲಿಸಬೇಕು ಎಂದರು.
ವಲಸೆ ಹೋದವರು ಸೇರಿದಂತೆ ಮತದಾರರ ಪಟ್ಟಿ ಖಚಿತೆತೆಗೆ ಬಿಎಲ್ಓಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿ ನಿರ್ಧರಿಸುತ್ತಾರೆ. ಅಕ್ಷರಸ್ಥರು, ಅನಕ್ಷರಸ್ಥರು ಎಂಬ ಕುರಿತಾಗಿ ಎಲ್ಲರೂ ಮಾಹಿತಿಯನ್ನು ಬಿಎಲ್‌ಓಗಳಿಗೆ ನೀಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಏನೇ ಸಮಸ್ಯೆಗಳು, ಕುಂದುಕೊರತೆಗಳಿದ್ದಲ್ಲಲಿ ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಮತದಾರರ ಸಹಾಯಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದರು.
ಈ ಸಂದರ್ಬದಲ್ಲಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net