ಬಿಹಾರ ಚುನಾವಣೆಯಲ್ಲಿ ವೋಟ್ ಖರೀದಿ

ಬೋಸರಾಜು
ಬೋಸರಾಜು
Published on

ಪ್ರಮುಖ ಮುಖ್ಯಾಂಶಗಳು

  • ಚುನಾವಣೆ
  • ಆಯೋಗ
  • ಕೇಂದ್ರ ಸರ್ಕಾರ
ದೇವದುರ್ಗ: ಬಿಜೆಪಿ ಹಾಗೂ ಎನ್‌ಡಿಎ ನಾಯಕರು ಅಧಿಕಾರಕ್ಕೆ ಬರಲು ಬೇರೆ ಬೇರೆ ರಾಜ್ಯಗಳಲ್ಲಿ ಮತ ಕಳ್ಳತನ ಮಾಡಿದ್ದರೆ, ಬಿಹಾರದಲ್ಲಿ ಚುನಾವಣೆಗೆ ಮುನ್ನವೇ ನೇರವಾಗಿ ಮತ ಖರೀದಿ ಮಾಡುವ ಮೂಲಕ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಆರೋಪಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಆಯೋಗ ಕೇಂದ್ರ ಸರ್ಕಾರದ ಅಣತಿಯಂತೆ ವರ್ತಿಸುತ್ತಿದೆ. ಬಿಜೆಪಿ ನಾಯಕರು ವಿವಿಧ ರಾಜ್ಯದ ಚುನಾವಣೆಯಲ್ಲಿ ಮತಚೋರಿ ಮಾಡಿದ್ದಾರೆ.
ಕರ್ನಾಟಕ ವಿವಿಧ ಜಿಲ್ಲೆಯಲ್ಲಿ ಮತದಾರರ ಹೆಸರು ಅಕ್ರಮವಾಗಿ ಡಿಲೀಟ್ ಮಾಡುವ ಮೂಲಕ ಮತ ಕಳ್ಳತನ ಮಾಡಿದ್ದರೆ ಕೆಲಕಡೆ ಅಕ್ರಮವಾಗಿ ಸೇರ್ಪಡೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರೆ ದೆಹಲಿ, ಹರಿಯಾಣ ಸೇರಿ ವಿವಿಧೆಡೆ ಮತ ಕಳ್ಳತನ ಮಾಡಿದ್ದಾರೆ ಎಂದು ಟೀಕಿಸಿದರು.
ನಮ್ಮ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದರೂ ಚುನಾವಣೆ ಆಯೋಗ ಈ ಬಗ್ಗೆ ತನಿಖೆ ಮಾಡುತ್ತಿಲ್ಲ. ಬಿಹಾರ ಚುನಾವಣೆ ಮುನ್ನ ಲಕ್ಷಾಂತರ ಮತದಾರರ ಹೆಸರು ಡಿಲೀಟ್ ಮಾಡಲಾಗಿತ್ತು. ನಂತರ ಸರ್ಕಾರ ಮತದಾನಕ್ಕೆ ಮುನ್ನ ಮಹಿಳೆಯರ ಖಾತೆಗೆ ಹಣಹಾಕಿ ನೇರವಾಗಿಯೇ ಮತ ಖರೀದಿಮಾಡಿದೆ. ಆ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿದೆ. ಕೇಂದ್ರ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ಹಾಗೂ ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ನವೆಂಬರ್ ಕ್ರಾಂತಿ

ನವೆಂಬರ್ ಕ್ರಾಂತಿ ಎನ್ನುವುದು ಏನು ಇಲ್ಲ ಅದೆಲ್ಲ ಸುಳ್ಳು ಸುದ್ದಿ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವೇಚನೆಗೆ ಬಿಟ್ಟ ವಿಚಾರ. ಈ ಬಗ್ಗೆ ಸ್ವತಃ ಸಿಎಂ ಹೇಳಿಕೆ ನೀಡಿದ್ದಾರೆ. ಇದರಲ್ಲಿ ನನ್ನ ಅಭಿಪ್ರಾಯವೇನು ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯೇ ನನ್ನ ಅಭಿಪ್ರಾಯ ಎಂದರು.
ಎಪಿಎಂಸಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಪ್ರಮುಖರಾದ ರವಿ ಪಾಟೀಲ್, ರಾಮಣ್ಣ ಇರಬಗೇರಾ, ಬಸವರಾಜ ಪಂಪಾಪತಿ, ಶರಣಗೌಡ ಗೌರಂಪೇಟೆ, ರಾಮಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net