ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಲಿ

ಅರಕೇರಾ ತಾಲೂಕಿನ ಬಿ.ಗಣೇಕಲ್ ಗ್ರಾಪಂ ಪಿಡಿಒ ವೆಂಕೋಬ ನಾಯಕಗೆ ಕೂಲಿ ಕಾರ್ಮಿಕರು ಹಾಗೂ ಮೇಟಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಬಾಲಯ್ಯ ದೊರೆ, ಬಸವರಾಜ ಪಂದ್ಯಾನ, ಮಲ್ಲಯ್ಯ ದಳವಾಯಿ, ಆಂಜನೇಯ ಅಬಕಾರಿ, ಶಿವರಾಜ ಬಾಬೆ, ಹನುಮಂತ್ರಾಯ ನಾಯಕ, ಹಾಜಿ ಮಸ್ತಾನ್, ಮಲ್ಲೇಶ ನಾಯಕ, ಬಾಲಯ್ಯ ಹುಲೆಗುಡ್ಡ, ರೆಡ್ಡಿ ನಾಯಕ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೂಲಿ
  • ಕಾರ್ಮಿಕರು
  • ಮೇಟಿಗಳು
ಅರಕೇರಾ: ಕೇಂದ್ರ ಸರ್ಕಾರ ಮನರೇಗಾವನ್ನು ದುರ್ಬಲಗೊಳಿಸುವ ಉದ್ದೇಶದಿಂದ ರೂಪಿಸಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕೂಲಿ ಕಾರ್ಮಿಕರು ಹಾಗೂ ಮೇಟಿಗಳು ಸೋಮವಾರ ತಾಲೂಕಿನ ಬಿ.ಗಣೇಕಲ್ ಗ್ರಾಪಂ ಪಿಡಿಒ ವೆಂಕೋಬ ನಾಯಕಗೆ ಮನವಿ ಸಲ್ಲಿಸಿತು.
ಈ ಹಿಂದೆ ಇದ್ದ ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವಂತೆ ಸರ್ವಾನುಮತದಿಂದ ಗ್ರಾಪಂನಲ್ಲಿ ಠರಾವು ಪಾಸ್ ಮಾಡಿ ದಾಖಲಿಸಬೇಕು. ಠರಾವು ಪಾಸ್ ಮಾಡಿದ ಪ್ರಮಾಣಿತ ಪ್ರತಿಯನ್ನು ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಸ್ವರೂಪವನ್ನು ಇತ್ತೀಚೆಗೆ ಬದಲಿಸಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಸೀಮಿತಗೊಳಿಸಿದ್ದು, ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ ಇದು ಕಾರ್ಮಿಕ ವಿರೋಧಿ ಕಾಯ್ದೆಯಾಗಿದೆ ಎಂದು ಆರೋಪಿಸಿದರು. ಪ್ರಮುಖರಾದ ರವಿ ಮೂಕ ನಾಯಕ ತಾಂಡಾ, ಗುರುಪಾದ, ಶಿವು ಗೊರ್ಲಿ, ಅಲ್ಲಿಸಾಬ್, ಮುದುಕಪ್ಪ, ಪ್ರಭುಸ್ವಾಮಿ, ವೀರೇಶ ದಳವಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net