ಸಿಂಧನೂರಿನಲ್ಲಿ ಎಂಎಲ್ಸಿ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಮನರೇಗಾ ಬಚಾವ್ ಸಂಗ್ರಾಮ್ ಒಂದು ದಿನದ ನಿರಶನ ನಡೆಸಲಾಯಿತು. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಪ್ರಮುಖರಾದ ವೆಂಕಟೇಶ ಬಾದರ್ಲಿ, ಶಿವಕುಮಾರ ಜವಳಿ, ವೀರರಾಜು, ಚನ್ನಬಸವ ಕೋಟೆ, ಸಂಗಮೇಶ, ಶರಣಯ್ಯಸ್ವಾಮಿ, ಖಾಜಾ ಹುಸೇನ ರೌಡಕುಂದ ಇದ್ದರು.
ಸಿಂಧನೂರು: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಿ ಮನರೇಗಾ ಪುನಃ ಜಾರಿಗೊಳಿಸಲು ಒತ್ತಾಯಿಸಿ ಎಂಎಲ್ಸಿ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಮನರೇಗಾ ಬಚಾವ್ ಸಂಗ್ರಾಮ್ ಒಂದು ದಿನದ ನಿರಶನ ನಡೆಸಲಾಯಿತು.
ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದಭರ್ದಲ್ಲಿ ದೇಶದ ಬಡವರಿಗೆ ಉದ್ಯೋಗ ನೀಡಬೇಕೆಂಬ ಉದ್ದೇಶದಿಂದ ಮನರೇಗಾ ಯೋಜನೆ ಜಾರಿಗೆ ತಂದರು. ಆದರೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಕಸಿದು ನಿರುದ್ಯೋಗ ಸೃಷ್ಟಿಸುವ, ಮಹಾ ನಗರಗಳಿಗೆ ಗುಳೆ ಕಳಿಸುವ ಕುತಂತ್ರ ನಡೆಸಿದೆ. ಈಗಾಗಲೇ ಪಂಜಾಬ್, ತೆಲಂಗಾಣ ಸರ್ಕಾರಗಳು ವಿಬಿ ಗ್ರಾಮ್ ಜಿ ಕಾಯ್ದೆ ವಿರೋಧಿಸಿ ರದ್ದುಪಡಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿವೆ. ಅದರಂತೆ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಈ ಕಾಯ್ದೆ ವಿರೋಧಿಸಿ ತೀರ್ಮಾನ ಕೈಗೊಳ್ಳಬೇಕು. ಜತೆಗೆ ರಾಜ್ಯ ಸರ್ಕಾರವು ಎರಡು ದಿನಗಳ ಕಾಲ ವಿಶೇಷ ಸಚಿವ ಸಂಪುಟ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ.
ಬಡವರ ಬದುಕಿಗೆ ಮಾರಕವಾಗಿರುವ ಈ ಕಾಯ್ದೆಯನ್ನು ಪಕ್ಷಾತೀತವಾಗಿ ವಿರೋಧಿಸಬೇಕು ಎಂದು ನಿರಶನ ನಿರತರು ಒತ್ತಾಯಿಸಿದರು.