ವಿಬಿ ಜಿ ರಾಮ್ ಜಿ ಸಮರ್ಪಕ ಅನುಷ್ಠಾನಗೊಳಿಸಿ

ಬಾಗೂರು ಕೆರೆಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಭೇಟಿ ನೀಡಿ ವಿಬಿ ಜಿ ರಾಮ್ ಜಿ ಕಾಮಗಾರಿ ಪರಿಶೀಲಿಸಿದರು. ತಾಪಂ ಇಒ ಕೆ.ರಾಜೇಂದ್ರ ಕುಮಾರ, ಅರಕೇರಾ ತಾಪಂ ಇಒ ಡಾ.ಯಮನಪ್ಪ ವಾಲ್ಮೀಕಿ, ಎಡಿ ಅಣ್ಣಾರಾವ್ ಇದ್ದರು.
ಬಾಗೂರು ಕೆರೆಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಭೇಟಿ ನೀಡಿ ವಿಬಿ ಜಿ ರಾಮ್ ಜಿ ಕಾಮಗಾರಿ ಪರಿಶೀಲಿಸಿದರು. ತಾಪಂ ಇಒ ಕೆ.ರಾಜೇಂದ್ರ ಕುಮಾರ, ಅರಕೇರಾ ತಾಪಂ ಇಒ ಡಾ.ಯಮನಪ್ಪ ವಾಲ್ಮೀಕಿ, ಎಡಿ ಅಣ್ಣಾರಾವ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಒಗಳಿಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಸೂಚನೆ
  • ವಿವಿಧ ಗ್ರಾಮಗಳಿಗೆ ಭೇಟಿ
ದೇವದುರ್ಗ: ಗ್ರಾಮೀಣ ಭಾಗದ ಜನರಿಗೆ ಇದ್ದೂರಿನಲ್ಲೇ ಕೆಲಸ ನೀಡಲು ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೊಳಿಸಿದ್ದು, ಸರಿಯಾಗಿ ಅನುಷ್ಠಾನ ಮಾಡಬೇಕು. ಅರ್ಹರಿಗೆ ಕೆಲಸ ನೀಡಿ ಯೋಜನೆ ಯಶಸ್ವಿಗೆ ಮುಂದಾಗಬೇಕು ಎಂದು ಪಿಡಿಒಗಳಿಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಸೂಚಿಸಿದರು. 
ಬಾಗೂರು ಗ್ರಾಮದ ಕೆರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. 
ಅರ್ಜಿ ಸಲ್ಲಿಸುವ ಎಲ್ಲರಿಗೂ ಅರ್ಹತೆ ಆಧಾರದ ಮೇಲೆ ಕೆಲಸ ನೀಡಬೇಕು. ಯೋಜನೆ ಗೊಂದಲ ನಿವಾರಿಸಿ ಜಾಗೃತಿ ಮೂಡಿಸಬೇಕು. ಸಾಮೂಹಿಕ ಕೆಲಸದ ಜತೆಗೆ ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶ ನೀಡಬೇಕು. ಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆವಹಿಸಬೇಕು ಎಂದು ತಾಕೀತು ಮಾಡಿದರು. 
ನಂತರ ವಿಬಿ ಜಿ ರಾಮ್ ಜಿ ಕಾಮಗಾರಿ ಸ್ಥಳವನ್ನು ಪರಿಶೀಲಿಸಿದರು. ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ಪೂರ್ತಿ ಪ್ರಮಾಣದ 382 ರೂ. ದಿನದ ಕೂಲಿ ದೊರೆಯುತ್ತದೆ. ಹೊಸ ಕೆರೆ ನಿರ್ಮಾಣದಿಂದ ಅಂತರ್ಜಲ ಸಂವರ್ಧನೆ , ದನಕರುಗಳಿಗೆ ಕುಡಿವ ನೀರು ಲಭ್ಯತೆ ಹಾಗೂ ಮೇವು ಬೇಳೆಯಲು ಸಹಾಯವಾಗುತ್ತದೆ ಎಂದರು.
ನಂತರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಕಿಶೋರಿ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ನಡೆಯುವ ಉಪನ್ಯಾಸ ಕಾರ್ಯಕ್ರಮ, ಸಂಪನ್ಮೂಲ ವ್ಯಕ್ತಿಗಳ ಲಭ್ಯತೆ ಹಾಗೂ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಕೆಲಕಾಲ ಸಂವಾದ ನಡೆಸಿದರು. 
ಕಂಪ್ಯೂಟರ್ ಸಾಕ್ಷರತೆ, ಗಣಿತ ಮತ್ತು ಸಂಖ್ಯಾಶಾಸ್ತ್ರ, ಇಂಗ್ಲಿಷ್ ಗ್ರಾಮರ್ ಹಾಗೂ ಪರೀಕ್ಷಾ ಪೂರ್ವ ಸಿದ್ಧತೆಗಾಗಿ ನೀಡಲಾಗುತ್ತಿರುವ ತರಬೇತಿಗಳ ಕುರಿತು ಮಾಹಿತಿ ಪಡೆದರು. ಬಳಿಕ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಸ್ವಚ್ಛತೆ ಕಾಪಾಡುವಂತೆ ಆಡಳಿತ ಮಂಡಳಿಗೆ ಸೂಚಿಸಿದರು.
ತಾಪಂ ಇಒ ಕೆ.ರಾಜೇಂದ್ರ ಕುಮಾರ್, ಅರಕೇರಾ ತಾಪಂ ಇಒ ಡಾ.ಯಮುನಪ್ಪ ವಾಲ್ಮೀಕಿ, ಎಡಿ ಅಣ್ಣಾರಾವ್, ಶರ್ಫುನ್ನಿಸ್ಸಾ ಬೇಗಂ, ಬಿಇಒ ರಾಧಾಬಾಯಿ, ಟಿಎಚ್‌ಒ ಡಾ.ಬನದೇಶ್ವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net