41 ಪ್ರಕರಣಗಳ ಪೈಕಿ 89.32 ಲಕ್ಷ ರೂ. ಮೌಲ್ಯ ವಸ್ತುಗಳು ಜಪ್ತಿ

ಡಿವೈಎಸ್ಪಿ ಈ.ಶಾಂತವೀರ
ಡಿವೈಎಸ್ಪಿ ಈ.ಶಾಂತವೀರ
Published on

ಪ್ರಮುಖ ಮುಖ್ಯಾಂಶಗಳು

  • ರಾಯಚೂರು ಡಿವೈಎಸ್ಪಿ ಶಾಂತವೀರ ಮಾಹಿತಿ

ರಾಯಚೂರು

ಜಿಲ್ಲಾ ಪೊಲೀಸ್ ಇಲಾಖೆಯ ರಾಯಚೂರು ಉಪ ವಿಭಾಗದಲ್ಲಿ 2025ರ ಜನವರಿ 01 ರಿಂದ 2026ರ ಜೂನ್ 30ರವರೆಗೆ ದಾಖಲಾದ 41 ವಿವಿಧ ಕಳವು ಪ್ರಕರಣಗಳನ್ನು ಪತ್ತೆಹಚ್ಚಿ ಒಟ್ಟು 89.32 ಲಕ್ಷ ರೂ. ಜಪ್ತಿ ಮಾಡಿ ಸ್ವತ್ತು ಕಳೆದುಕೊಂಡ ಮಾಲೀಕರಿ ಹಸ್ತಾಂತರ ಮಾಡಲಾಗಿದೆ.

ಉಪ ವಿಭಾಗದ 11 ಠಾಣೆಗಳಲ್ಲಿ ದಾಖಲಾದ ವಿವಿಧ ಸ್ವತ್ತು ಸಂಬಂಧಿತ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಿ, ಹೆಚ್ಚಿನ ಪ್ರಮಾಣದ ಕಳುವಾದ ಆಸ್ತಿಯನ್ನು ಮರು ಹಿಂಪಡೆಯುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದು,

ಹಣದ ಆಸೆಗೆ ಕೊಲೆ, ಕಳ್ಳತನ, ಸರಗಳ್ಳತನ, ಮನೆಗಳ್ಳತನ, ಸಮಾನ್ಯ ಕಳ್ಳತ,ವಾಹನ ಕಳ್ಳತನ,ಜಾನುವಾರು ಕಳ್ಳತನಗಳು ಸೇರಿ 1055 ಮೊಬೈಲ್‌ಗಳು,490.05 ಗ್ರಾಂ ಬೆಳ್ಳಿ ಆರಭರಣಗಳು, 1080.12 ಗ್ರಾಂ ಚಿನ್ನಾಭರಣಗಳು, 2.41 ಲಕ್ಷ ರೂ. ನಗದು ಹಣ ಹಾಗೂ 40 ದ್ವಿಚಕ್ರ ವಾಹನಗಳು ಸೇರಿ ಒಟ್ಟು 89,32,912 ರೂ. ಬೆಲೆ ಬಾಳುವ ಸ್ವತ್ತುನ್ನು ಮಾಲೀಕರಿ ಹಸ್ತಾಂತರ ಮಾಡಲಾಗಿದೆಂದು ಡಿವೈಎಸ್ಪಿ ಈ.ಶಾಂತವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net