ರಾಯಚೂರು ಆರ್‌ಎಸ್‌ಎಸ್‌ನ ಸಿದ್ದಾಂತಗಳನ್ನು ಬಲಪಡಿಸಲು ಕೇಂದ್ರದ ಬಿಜೆಪಿ ಸರ್ಕಾರವು ಯುಪಿಎ ಸರ್ಕಾರದ ಯೋಜನೆಗಳಿಗೆ ಕೊಡಲಿ ಪೆಟ್ಟು ನೀಡುವ ಕೆಲಸ ಮಾಡುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಆರೋಪಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಬಿಜಿ ರಾಮ್‌ಜಿ ಯೋಜನೆ ಕಾಯ್ದೆ ಜಾರಿ ಮಾಡುವುದರ ಮೂಲಕ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮೂಲ ಆಶಯವನ್ನು ವಿರೂಪಗೊಳಿಸುವ ಕೆಲಸಕ್ಕೆ ಮುಂದಾಗಿದೆ.
ಗ್ರಾಮ ಪಂಚಾಯಿತಿಗಳಿಗೆ ಇದ್ದ ಅಧಿಕಾರವನ್ನು ಮೊಟುಕುಗೊಳಿಸಿ ಕೇಂದ್ರವೇ ಅವಶ್ಯಕತೆಯಿದ್ದರೆ ಕಾಮಗಾರಿ ನಡೆಸುವ ತೀರ್ಮಾನ ಮಾಡಿರುವದು ಕಳವಳಕಾರಿ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಖಾತ್ರಿ ಯೋಜನೆ ಕಾಮಗಾರಿ ಇನ್ನು ಮುಂದೆ ಕೇಂದ್ರ ಸರ್ಕಾರ ಸೂಚಿಸಿದರೆ ಮಾತ್ರ ನಡೆಯುತ್ತದೆ ಹೊರತು ಎಲ್ಲರಿಗೂ ಉದ್ಯೋಗ ದೊರೆಯುವದಿಲ್ಲ. ಗ್ರಾಮೀಣ ಪ್ರದೇಶ ವಸ್ತುಸ್ಥಿತಿ ಅರಿವಿಲ್ಲದೇ ಇದ್ದರೂ ಗ್ರಾಮ ಪಂಚಾಯ್ತಿಗಳಿಗೆ ಇದ್ದ ಕೆಲಸ ಆಯ್ಕೆಯನ್ನು ಕಸಿದುಕೊಂಡಿದೆಮದು ಆರೋಪಿಸಿದರು.
ಮಹಾತ್ಮಗಾಂಧಿ ಹೆಸರನ್ನು ಸಹಿಸದೇ ಇರುವ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗಿಯಾಗಿಲ್ಲ. ಆರ್‌ಎಸ್‌ಎಸ್ ಪ್ರೇರಿತವಾಗಿ ಬಡವರನ್ನು ಅಭಿವೃದ್ಧಿ ಗೊಳಿಸದಂತೆ ತಡೆಯುವಹುನ್ನಾರ ನಡೆಸುತ್ತಿದೆ. ನೂರು ದಿನ ಉದ್ಯೋಗ ಖಾತ್ರಿ ನೀಡುವಯೋ ಜನೆಯಡಿ ಬಡ, ಕೂಲಿ ಕಾರ್ಮಿಕರಿಗೆ ಸಹಕಾರಿಯಾಗಿತ್ತು.
ವಲಸೆ ಹೋಗುವದನ್ನು ನಿಯಂತ್ರಿಸಿ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಿದ್ದ ಯೋ ಜನೆ ಭವಿಷ್ಯದಲ್ಲಿ ಇಲ್ಲದಂತೆ ಮಾಡುವ ಕೆಲಸ ಪ್ರಾರಂಭವಾಗಿದೆ. 2014 ರಲ್ಲಿ ಮಂಡನೆಯಾದ ಕೇಂದ್ರ ಬಜೆಟ್ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಕತ್ತಲೆ ಯೋಜನೆಯೆಂದು ಟೀಕಿಸಿದ್ದ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಸಂಪೂರ್ಣ ನಾಶ ಮಾಡಲು ಹೊರಟಂತಿದೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಎಂಎಲ್ಸಿ ಎ.ವಸಂತಕುಮಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಶಾಸಕರುಗಳಾದ ಹಂಪಯ್ಯನಾಯಕ, ಬಸನಗೌಡ ದದ್ದಲ್, ಶರಣಗೌಡ ಪಾಟೀಲ್ ಬಯ್ಯಪುರು,ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ,ಅಮರೇಗೌಡ ಅಂಚಿನಾಳ ಇದ್ದರು.