

ಪ್ರಮುಖ ಮುಖ್ಯಾಂಶಗಳು
ಸಿಂಧನೂರು ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಮೇ 23ರವರೆಗೆ ಖರೀದಿಸಿರುವ ಜೋಳದ ಹಣ ಪಾವತಿಸಲಾಗಿದೆ. ನಂತರ ಜೂ.15ವರೆಗೆ ಖರೀದಿಸಿರುವ ಜೋಳದ ಹಣ ಬರಬೇಕಿದೆ. ಆದಷ್ಟು ಶೀಘ್ರವೇ ರೈತರ ಖಾತೆಗೆ ಹಣ ಪಾವತಿಯಾಗಲಿದೆ.
— > ಅರುಣ್ ದೇಸಾಯಿ ತಹಸೀಲ್ದಾರ್, ಸಿಂಧನೂರು
ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆದಿದ್ದು, ಈ ಪೈಕಿ ಸಿಂಧನೂರು ತಾಲೂಕಿನ ಪಾಲು ಹೆಚ್ಚಿದೆ. ಕಳೆದ ಮೂರು ತಿಂಗಳ ಹಿಂದೆಯೇ ಜೋಳ ಖರೀದಿ ಪ್ರಕ್ರಿಯೆ ಮುಗಿದಿದ್ದು, ಇದುವರೆಗೆ ಹಣ ಪಾವತಿಸಿಲ್ಲ. ಈ ಭಾಗದ ರೈತರು ಕೃಷಿ ಚಟುವಟಿಕೆಗೆ ಜೋಳದ ಹಣ ನಂಬಿಕೊಂಡಿದ್ದಾರೆ. ಕೂಡಲೇ ರೈತರ ಖಾತೆಗೆ ಹಣ ಜಮಾ ಮಾಡಲು ಕ್ರಮಕೈಗೊಳ್ಳಬೇಕು.
— > ಹೊನ್ನನಗೌಡ ಬೆಳಗುರ್ಕಿ ರೈತ ಮುಖಂಡ, ಸಿಂಧನೂರು