8.16 ಲಕ್ಷ ಕ್ವಿಂಟಾಲ್ ಮಾರಾಟ: ತಾಲೂಕಿನಲ್ಲಿ ಮುಂಗಾರು ಜೋಳ ಖರೀದಿಗೆ ಜ.13ರಿಂದ ನೋಂದಣಿ, ಮಾ.23ರಿಂದ ಖರೀದಿ ಆರಂಭ, ಏ.30ಕ್ಕೆ ಖರೀದಿ ಪ್ರಕ್ರಿಯೆ ಮುಗಿಸಲಾಗಿದ್ದು, ಎಫ್‌ಐಡಿ ಲಾಕ್ ಆಗಿದ್ದ ರೈತರ ಜೋಳ ಖರೀದಿ ಮಾಡಲಾಗುತ್ತಿದೆ. ಒಟ್ಟು 8.16 ಲಕ್ಷ ಕ್ವಿಂಟಾಲ್ ಫಸಲು ರೈತರಿಂದ ಮಾರಾಟವಾಗಿದೆ. ಕಳೆದ ತಿಂಗಳು ಹಣ ಪಾವತಿ ಮಾಡುವುದಾಗಿ ಕೆಎಫ್‌ಸಿ ಹೇಳಿತ್ತು. ಆದರೆ, ಇನ್ನೂ ಹಣ ಪಾವತಿಗೆ ಮುಂದಾಗಿಲ್ಲ. ಒಟ್ಟಿನಲ್ಲಿ ಮುಂಗಾರು-ಹಿಂಗಾರು ಜೋಳ ಖರೀದಿ ಪ್ರಕ್ರಿಯೆಯು ವಿಳಂಬ, ಖರೀದಿ ನಂತರ ರೈತರ ಖಾತೆಗೆ ಹಣ ಪಾವತಿಯಲ್ಲಿಯೂ ವಿಳಂಬ ನೀತಿ ಅನುಸರಿಸುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.