ಪಿಕಾರ್ಡ್ ಬ್ಯಾಂಕ್‌ಗೆ ಅವಿರೋಧ ಆಯ್ಕೆ

ಲಿಂಗಸುಗೂರಿನಲ್ಲಿ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಅವರನ್ನು ಸನ್ಮಾನಿಸಲಾಯಿತು. ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಶಶಿಧರ ಪಾಟೀಲ್ ಆಶಿಹಾಳ, ಶರಣಪ್ಪ ಜಾವೂರು ಇತರರಿದ್ದರು.
ಲಿಂಗಸುಗೂರಿನಲ್ಲಿ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಅವರನ್ನು ಸನ್ಮಾನಿಸಲಾಯಿತು. ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಶಶಿಧರ ಪಾಟೀಲ್ ಆಶಿಹಾಳ, ಶರಣಪ್ಪ ಜಾವೂರು ಇತರರಿದ್ದರು.
Published on
ಲಿಂಗಸುಗೂರು: ಪಟ್ಟಣದ ಪಿಕಾರ್ಡ್ ಬ್ಯಾಂಕ್‌ಗೆ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಬೆಂಬಲಿತ ಮೂವರು ಗುರುವಾರ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದರು.
ಆಮದಿಹಾಳ ಹಿಂದುಳಿದ (ಬ) ಮೀಸಲು ಕ್ಷೇತ್ರದಿಂದ ಶರಣಪ್ಪ ಕೋಮಲಾಪುರ, ಮಟ್ಟೂರು ಮಹಿಳಾ ಮೀಸಲು ಕ್ಷೇತ್ರದಿಂದ ಶಂಭುಲಿಂಗಮ್ಮ ಜಾವೂರು ಹಾಗೂ ಸಂತೆಕೆಲ್ಲೂರು ಹಿಂದುಳಿದ ವರ್ಗ (ಅ) ಕ್ಷೇತ್ರದಿಂದ ಶಿವಗ್ಯಾನಪ್ಪ ಹೂವಿನಭಾವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಫೆ.11 ರಂದು ನಡೆಯಲಿರುವ ಸದಸ್ಯರು, ನಿರ್ದೇಶಕರ ಚುನಾವಣೆಗೆ 14 ಕ್ಷೇತ್ರಗಳಿಗೆ ಒಟ್ಟು 51 ಜನರು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 24 ಜನರು ನಾಮಪತ್ರ ವಾಪಸ್ ಪಡೆದಿದ್ದು, ಒಟ್ಟು 24 ಜನರು 11 ಕ್ಷೇತ್ರಗಳಿಗೆ ಕಣದಲ್ಲಿ ಉಳಿದಿದ್ದಾರೆ. ಮೂರು ಕ್ಷೇತ್ರಗಳಲ್ಲಿ ತಲಾ ಒಬ್ಬರು ಕಣದಲ್ಲಿ ಉಳಿದಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪೂರ ಅವರನ್ನು ಸನ್ಮಾನಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಟಿಎಪಿಎಂಎಸ್ ಅಧ್ಯಕ್ಷ ಶಶಿಧರ ಪಾಟೀಲ್ ಆಶಿಹಾಳ, ಶರಣಪ್ಪ ಜಾವೂರು, ಶರಣಪ್ಪ ಕೋಮಲಾಪುರ, ಚನ್ನಾರೆಡ್ಡಿ ಬಿರಾದಾರ, ರಾಮನಗೌಡ ವ್ಯಾಕರನಾಳ, ಬಸನಗೌಡ ಬಸಾಪುರ, ಸಂಗಮೇಶ ಕನ್ನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net