ಒಗ್ಗಟ್ಟಾದರೆ ಸಮಸ್ಯೆಗೆ ಪರಿಹಾರ

ದೇವದುರ್ಗ ತಾಲೂಕು ಸಲಿಕ್ಯಾಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ್ದ ರೈತರ ಸಭೆಯಲ್ಲಿ ಭಾಗವಹಿಸಿದ್ದ ಕೃಷಿಕರು. ತಾಲೂಕು ಅಧ್ಯಕ್ಷ ಮರಿಲಿಂಗ ಗೌರಂಪೇಟೆ, ರಮೇಶ ನಾಯಕ, ಚನ್ನಪ್ಪಗೌಡ ಪೊಪಾ, ಪ್ರಭಣ್ಣಗೌಡ ಮಾಪಾ, ಪ್ರಭು ಬಾಗ್ಲಿ, ಬಸವರಾಜ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ತಾಲೂಕು ಅಧ್ಯಕ್ಷ ಮರಿಲಿಂಗ ಅಭಿಮತ
  • ದೇವದುರ್ಗ ಸಲಿಕ್ಯಾಪುರ ರೈತಸಭೆ
ದೇವದುರ್ಗ: ಸರ್ಕಾರದ ಸೌಲಭ್ಯ ಪಡೆಯಲು ರೈತರು ಒಗ್ಗೂಡಬೇಕು. ಅನ್ನದಾತರು ಒಗ್ಗಟ್ಟಾದರೆ ಸಮಸ್ಯೆಗೆ ಪರಿಹಾರ ಪಡೆಯಬಹುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮರಿಲಿಂಗ ಗೌರಂಪೇಟೆ ಹೇಳಿದರು.
ತಾಲೂಕಿನ ಸಲಿಕ್ಯಾಪುರ ಗ್ರಾಮದಲ್ಲಿ ಆಯೋಜಿಸಿದ್ದ ರೈತಸಭೆ ಹಾಗೂ ಗ್ರಾಮ ಘಟಕ ರಚನಾ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಕೃಷಿ ಮಾಡುವುದು ಪ್ರಸ್ತುತ ದಿನಗಳಲ್ಲಿ ಅತ್ಯಂತ ಕಷ್ಟದ ಕೆಲಸವಾಗಿದ್ದು, ಹವಾಮಾನ ವೈಪರೀತ್ಯ, ಸರ್ಕಾರದ ನೀತಿ ನಿರೂಪಣೆಗಳು, ಬೆಲೆ ಏರಿಕೆ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಇರುವುದು ಸಂಕಷ್ಟಕ್ಕೆ ದೂಡಿದೆ ಎಂದರು.
ತಾಲೂಕು ಕಾರ್ಯದರ್ಶಿ ರಮೇಶ ನಾಯಕ, ಗೌರವಾಧ್ಯಕ್ಷ ಚನ್ನಪ್ಪಗೌಡ ಪೊಪಾ, ಗ್ರಾಮ ಘಟಕ ಅಧ್ಯಕ್ಷ ಪ್ರಭಣ್ಣಗೌಡ ಮಾಪಾ, ಪ್ರಭು ಬಾಗ್ಲಿ, ಬಸವರಾಜ್, ಮಲ್ಲಪ್ಪ, ಸಂಗರೆಡ್ಡಿ, ಹಸನ್‌ಅಲಿ, ಸುರೇಶ್ ಬಾಗ್ಲಿ, ನಿಂಗಯ್ಯ ಬಸವರಾಜ್, ತಿಪ್ಪಣ್ಣ, ಮಂಜು ಬಾಗ್ಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net