ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಿಗದ ಅನುದಾನ

ಲಿಂಗಸುಗೂರಿನ ಶ್ರೀ ಬಸವೇಶ್ವರ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜಿನಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಅವರು ಕಲ್ಯಾಣ ಮತ್ತು ಕಾಯಕ ಗ್ರಂಥಗಳನ್ನು ಬಿಡುಗಡೆ ಮಾಡಿದರು. ವೀವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ, ಕಾರ್ಯದರ್ಶಿ ಭೂಪನಗೌಡ ಪಾಟೀಲ್, ಉಪಾಧ್ಯಕ್ಷ ಮಲ್ಲೇಶಗೌಡ ಮಟ್ಟೂರು ಇತರರಿದ್ದರು.
ಲಿಂಗಸುಗೂರಿನ ಶ್ರೀ ಬಸವೇಶ್ವರ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜಿನಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಅವರು ಕಲ್ಯಾಣ ಮತ್ತು ಕಾಯಕ ಗ್ರಂಥಗಳನ್ನು ಬಿಡುಗಡೆ ಮಾಡಿದರು. ವೀವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ, ಕಾರ್ಯದರ್ಶಿ ಭೂಪನಗೌಡ ಪಾಟೀಲ್, ಉಪಾಧ್ಯಕ್ಷ ಮಲ್ಲೇಶಗೌಡ ಮಟ್ಟೂರು ಇತರರಿದ್ದರು.
Published on
ಲಿಂಗಸುಗೂರು: ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಸೇವಾ ಮನೋಭಾವದಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅಷ್ಟು ಸುಲಭವಿಲ್ಲ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು. 
ಪಟ್ಟಣದ ಶ್ರೀ ಬಸವೇಶ್ವರ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೆಳ್ಳಿ ಸಂಭ್ರಮದ ಸವಿನೆನಪು, ಕಲ್ಯಾಣ ಮತ್ತು ಕಾಯಕ ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಲಾಭಕ್ಕಲ್ಲ. ಸದೃಢ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಮ್ಮ ಸೇವೆ ಏನು ಎಂದು ತಿಳಿದು ಮಾಡುವ ಕೆಲಸ ಸಂಸ್ಥೆಯದ್ದಾಗಿರುತ್ತದೆ. ಲಾಭ ಒಂದೇ ಕಾರಣದಿಂದ ನಡೆಸುವ ಸಂಸ್ಥೆಗಳು ಮುಚ್ಚುವ ಸ್ಥಿತಿ ತಲುಪಿವೆ. ಈಗಾಗಲೇ ನಮ್ಮ ಭಾಗದಲ್ಲಿ 4 ಅನುದಾನಿತ ಶಿಕ್ಷಣ ಸಂಸ್ಥೆಗಳು ಮುಚ್ಚಿವೆ. ಖಾಸಗಿ ಸಂಸ್ಥೆಗಳಿಗೆ ಸಹಾಯ ಮಾಡುವವರಿಲ್ಲ, ಸರ್ಕಾರಕ್ಕೂ ಶಕ್ತಿ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿವೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಸಿಗುತ್ತಿಲ್ಲ ಎಂದರು.
ವೀವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮಾಡಲು ಪಾಲಕರ ಮನವೊಲಿಸುವ ಪರಿಸ್ಥಿತಿ ಬಂದೊದಗಿದೆ. ಪ್ರಸ್ತುತ ಕ್ರಿಯಾತ್ಮಕ ಶಿಕ್ಷಕರ ಅಗತ್ಯವಿದೆ. ಸಾಮರ್ಥ್ಯ ಪ್ರದರ್ಶಿಸಲು ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಈ ನೆಲವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರು ವಸತಿ ನಿಲಯಕ್ಕಿಡಲು ವೀವಿ ಸಂಘ ತೀರ್ಮಾನಿಸಿದೆ ಎಂದು ತಿಳಿಸಿದರು. 
ಪ್ರಮುಖರಾದ ಭೂಪನಗೌಡ ಪಾಟೀಲ್ ಕರಡಕಲ್ಲ, ಮಲ್ಲೇಶಗೌಡ ಮಟ್ಟೂರು, ಭೀಮನಗೌಡ ಮಾಕಾಪುರ, ಬಸವರಾಜ ಮೇಟಿ, ಎಚ್.ಎಲ್. ಪವಾರ, ಅಮರೇಗೌಡ ಬಾಗೂರು, ಮಹಾಂತಗೌಡ, ಸೂಗೂರೆಡ್ಡಿ ಮೇಟಿ, ಕಲ್ಲಯ್ಯ ಹಿರೇಮಠ, ಸಂಗಪ್ಪ, ಅನಸೂಯಾ, ಪ್ರಿಯಾಂಕಾ ಹಿರೇಮಠ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net