ಅಂಕುಡೊಂಕು ತಿದ್ದಿದ ನಿಜಶರಣ

ದೇವದುರ್ಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಪ್ರಮುಖರಾದ ಹನುಮಂತಪ್ಪ ಮನ್ನಾಪುರ, ಬಸವರಾಜ ಕೊಪ್ಪರ, ಶಿವರಾಜ ರುದ್ರಾಕ್ಷಿ, ಬಸವರಾಜ ಬ್ಯಾಗವಾಟ್, ಶಾಂತಪ್ಪ ಅಡಕಲಗುಡ್ಡ, ಸುರೇಶ ಅಂಗಡಿ, ಚಂದ್ರಶೇಖರ ಪಾಟೀಲ್, ಶರಣು ನಾಯಕ ಇತರರಿದ್ದರು.
ದೇವದುರ್ಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಪ್ರಮುಖರಾದ ಹನುಮಂತಪ್ಪ ಮನ್ನಾಪುರ, ಬಸವರಾಜ ಕೊಪ್ಪರ, ಶಿವರಾಜ ರುದ್ರಾಕ್ಷಿ, ಬಸವರಾಜ ಬ್ಯಾಗವಾಟ್, ಶಾಂತಪ್ಪ ಅಡಕಲಗುಡ್ಡ, ಸುರೇಶ ಅಂಗಡಿ, ಚಂದ್ರಶೇಖರ ಪಾಟೀಲ್, ಶರಣು ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚುಟುಕು
  • ಸಾಹಿತ್ಯ
  • ಪರಿಷತ್‌
ದೇವದುರ್ಗ: ವಚನಗಳ ಮೂಲಕ ಅಂಬಿಗರ ಚೌಡಯ್ಯ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜತೆಗೆ ನೇರ ನಿಷ್ಠುರದ ಶರಣರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಕಸಾಪ ಹಾಗೂ ಚುಟುಕು ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಜಾತಿ ಪದ್ಧತಿ, ವರ್ಗ ಶೋಷಣೆ, ಸಾಮಾಜಿಕ ತಾರತಮ್ಯ ವಿರುದ್ಧ ಚೌಡಯ್ಯ ಅನೇಕ ವಚನ ಬರೆದಿದ್ದಾರೆ. ತಪ್ಪು ಎನಿಸಿದ್ದನ್ನು ನೇರವಾಗಿ ನುಡಿಯುತ್ತಿದ್ದ ಶರಣರಾಗಿದ್ದರು. ಶರಣರ ನುಡಿಗಳು, ವಚನಗಳು ನಮ್ಮ ಬದುಕಿನ ಪರಿಶುದ್ಧ ಮಾರ್ಗಗಳು. ಅವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಉತ್ತಮ ಸಮಾಜ ಕಟ್ಟಲು ಮುಂದಾಗಬೇಕಿದೆ ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನರಸಿಂಗ್‌ರಾವ್ ಸರ್ಕಿಲ್ ಮಾತನಾಡಿ, ಶರಣರು ಸಮಾಜವನ್ನು ಮುನ್ನಡೆಸಲು ಅನೇಕ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಾವು ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಶರಣರನ್ನು ಒಂದು ಸಮಾಜಕ್ಕೆ ಸೀಮಿತ ಮಾಡದೆ ಎಲ್ಲರೂ ಅವರು ತೋರಿದ ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ಹೋರಾಟಗಾರ ಹನುಮಂತಪ್ಪ ಮನ್ನಾಪುರ, ಕಸಾಪ ಗೌರವ ಕಾರ್ಯದರ್ಶಿಗಳಾದ ಬಸವರಾಜ ಕೊಪ್ಪರ, ಶಿವರಾಜ ರುದ್ರಾಕ್ಷಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ್, ಮುಖಂಡರಾದ ಶಾಂತಪ್ಪ ಅಡಕಲಗುಡ್ಡ, ಸುರೇಶ ಅಂಗಡಿ, ಚಂದ್ರಶೇಖರ ಪಾಟೀಲ್, ಶರಣು ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net