ಸಂತೆಕೆಲ್ಲೂರಲ್ಲಿ ಬಿರುಗಾಳಿಗೆ ಉರುಳಿಬಿದ್ದ ಗಿಡಮರಗಳು

ಸಂತೆಕೆಲ್ಲೂರಲ್ಲಿ ಬಿರುಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬ ಹಾಗೂ ಮರಗಳು.
ಸಂತೆಕೆಲ್ಲೂರಲ್ಲಿ ಬಿರುಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬ ಹಾಗೂ ಮರಗಳು.
Published on
ಮಸ್ಕಿ: ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಏಕಾಏಕಿ ಬಿರುಗಾಳಿಯೊಂದಿಗೆ ಮಳೆಯಾಗಿದ್ದರಿಂದ ಹತ್ತಾರು ವಿದ್ಯುತ್ ಕಂಬಗಳು, ಗಿಡಮರಗಳು ಧರೆಗುರುಳಿವೆ. 
ಗ್ರಾಪಂ ಬಳಿ ಮರ ಉರುಳಿ ಬಿದ್ದು ನೀರಗಂಟಿ ಕುರುಗೋಡಪ್ಪ ಮೇಟಿ ಎಂಬುವರು ಗಾಯಗೊಂಡಿದ್ದು, ಲಿಂಗಸಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ನಿಲ್ದಾಣದ ಮುಖ್ಯರಸ್ತೆ ದ್ವಾರ, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಗಿಡಗಳು ಉರುಳಿ ಬಿದ್ದು, ಕಾಂಪೌಂಡ ಜಖಂಗೊಂಡಿದೆ. 
ಗ್ರಾಪಂ ಕಚೇರಿ ಮುಂಬಾಗದಲ್ಲಿದ್ದ ಬೃಹತ್ ಮರ ಮುಖ್ಯರಸ್ತೆಗೆ ಅಡ್ಡಲಾಗಿ ಬಿದ್ದು, ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯು-ರಸ್ತೆ ಸಂಪರ್ಕ ಕಡಿತವಾಗಿದೆ. ಪರ್ವತೇಶ್ವರ ದೇವಸ್ಥಾನ ಮುಂಭಾಗ ರಸ್ತೆ ಮತ್ತು ಬಜಾರದ ದೇವಿ ಕಟ್ಟೆ ಸೇರಿ ಹಲವೆಡೆ ಗಿಡ ಮರಗಳು ಉರುಳಿವೆ. ಅಲ್ಲದೆ ಮಾರಲದಿನ್ನಿ ಮುಸಲಿಕಾರ‌್ಲಕುಂಟಿ, ಮಟ್ಟೂರು ಸೇರಿ ವಿವಿಧ ಗ್ರಾಮಗಳಲ್ಲಿ ಭಾರಿ ಮಳೆಯಿಂದ ಜಮೀನುಗಳು ಜಲಾವೃತವಾಗಿದ್ದು ತೋಟಗಾರಿಕೆ ಬೆಳೆಗಾಳಿಗೆ ಹಾನಿಯಾಗಿ ಒಡ್ಡುಗಳು ಒಡೆದಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net