ಗ್ರಾಮೀಣ ಜನರಿಗಾಗಿ ಟ್ರೀ ಪಾರ್ಕ್

ತಾಲೂಕಿನ ಯರಗೇರಾ ಗ್ರಾಮದಲ್ಲಿ  ನಿರ್ಮಾಣವಾಗುತ್ತಿರುವ ಟ್ರೀ ಪಾರ್ಕ್ ನೋಟ.
ತಾಲೂಕಿನ ಯರಗೇರಾ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಟ್ರೀ ಪಾರ್ಕ್ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ಅನುಕೂಲ
  • 200 ಮೀ. ನಿಸರ್ಗ ನಡಿಗೆ ನಿರ್ಮಾಣ
  • 2 ಕೋಟಿ ವೆಚ್ಚದಲ್ಲಿ ನಿರ್ಮಾಣ
ರಾಯಚೂರು ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಹಾಗೂ ಪಕ್ಕದ ಮಂತ್ರಾಲಯ ಸೇರಿ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗಳು ತುಸು ವಿಶ್ರಾಂತಿ ಮಾಡಲು ಮೊದಲ ಬಾರಿಗೆ ತಾಲೂಕಿನ ಯರಗೇರಾ ಅರಣ್ಯ ಪ್ರದೇದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಟ್ರೀ ಪಾರ್ಕ್ ನಿಮಾರ್ಣ ಮಾಡಲಾಗುತ್ತಿದೆ.
ಮಂತ್ರಾಲಯ -ರಾಯಚೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು 16 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಾಣವಾಗುತ್ತಿದ್ದು, ಅಲ್ಲಿ ಬೆಳೆದುನಿಂತಿರುವ ವಿವಿಧ ತಳಿಗಳ ಮರಗಳು ಬರಡು ಬೆಟ್ಟದಲ್ಲಿ ಹಸಿರ ಸಿರಿ ಸೃಷ್ಟಿಸಿವೆ. ಮಂತ್ರಾಲಯ ರಾಯರ ದರ್ಶನ, ಶ್ರೀಶೈಲ ಮಲ್ಲಿಕಾರ್ಜುನ ದರ್ಶನ,ಬಿಚ್ಚಲಿ, ಪಂಚಾಮುಖಿ ಹಾಗೂ ರಾಯಚೂರು ವಿಶ್ವ ವಿದ್ಯಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಹಾಗೂ ವಿದ್ಯಾರ್ಥಿಗಳ ಪಾಲಿಗೆ ಇದು ಆಕರ್ಷಣೀಯ ತಾಣವಾಗಿ ಮಾರ್ಪಟಲಿದೆ. ಇಲ್ಲಿನ ಸೊಬಗು ಕಣ್ಣುಂಬಿಕೊಳ್ಳಲು ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ನಿತ್ಯ ನೂರಾರು ಸಂಖ್ಯೆಯಲ್ಲಿ ಅಗಮಿಸಲಿದ್ದಾರೆ.
ಹಸಿರು ಸಂಪರ್ಕ
ಬಿಸಿಲನಾಡು ರಾಯಚೂರು ದಿನದಿಂದ ದಿನಕ್ಕೆ ಅಭಿವೃದ್ದಿಯ ಜತೆಗೆ ನಗರದ ಪ್ರಕೃತಿಯೊಂದಿಗೆ ನಮ್ಮ ಪ್ರೀತಿಯ ನೆನಪುಗಳನ್ನು ಬೆಸೆಯುತ್ತೇವೆ. ಈ ಪಾರ್ಕ್‌ನಿಂದ ಸಾರ್ವಜನಿಕರು ಒಡ್ಡಿಕೊಳ್ಳುವುದರಿಂದ ಪ್ರಕೃತಿಯೊಂದಿಗೆ ನಿರ್ಣಾಯಕ ಸಂಪರ್ಕವನ್ನು ಬೆಳೆಸಿಕೊಳ್ಳಲುಅವಕಾಶ ದೊದೆಯಲಿದೆ. ಜನದಟ್ಟಣೆಯ ನಗರಗಳಲ್ಲಿ ಹಸಿರು ಸ್ಥಳಗಳ ಅಗತ್ಯತೆ ಮತ್ತು ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ನೈಸರ್ಗಿಕ ಸ್ಥಿತಿಯಲ್ಲಿ ಹಸಿರನ್ನು ಪ್ರಶಂಸಿಸಲು ಅರಣ್ಯ ಇಲಾಖೆ ಅನುವು ಮಾಡಿಕೊಡುತ್ತದೆ. ಇದಲ್ಲದೆ, ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರಕೃತಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು (ದೈಹಿಕ ಮತ್ತು ಮಾನಸಿಕ) ಒದಗಿಸುತ್ತದೆ, ನಗರಗಳ ಶಬ್ದ, ಮಾಲಿನ್ಯ ಮತ್ತು ಜನದಟ್ಟಣೆಯಿಂದ ತಪ್ಪಿಸಿಕೊಳ್ಳಲು ಇದು ಒಂದು ಮಾರ್ಗವಾಗಿದೆ.
ಸಂಸ್ಕೃತಿ ಪ್ರತಿಫಲನ
ಜಿಲ್ಲೆಯಲ್ಲಿ ಸಾಂಸ್ಕೃತಿಕ ವೈಭವ ಹಾಗೂ ವಿವಿಧ ಪಕ್ಷಿಗಳ ಪ್ರತಿಕೃತಿ ಹಾಗೂ ನಾಮಫಲಕಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಜತೆಗೆ ಗ್ರಾಮೀಣ ಭಾಗ್ದ ಮಕ್ಕಳಿಗಾಗಿ ಪ್ರಕೃತಿ ಶಿಬಿರ, ಮಕ್ಕಳ ವನ್ಯದರ್ಶನ ಕಾರ್ಯಕ್ರಮ, ಪ್ರವಾಸಿಗರಿಗೆ ಆಕರ್ಷಣೆ, ಮಕ್ಕಳ ಆಟದ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ.
2 ಕೋಟಿ ವೆಚ್ಚದಲ್ಲಿ ನಿರ್ಮಾಣ
ಒಟ್ಟು 16 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಟ್ರೀ ಪಾರ್ಕ್‌ವನ್ನು ಒಟ್ಟು 2.5 ಕೋಟಿ ರೂ. ಸರ್ಕಾರ ಅರಣ್ಯ ಇಲಾಖೆ ಮೂಲಕ ಅನುದಾನ ಘೋಷಣೆ ಮಾಡಿದ್ದು, ನಾಲ್ವು ವರ್ಷದ ಯೋಜನೆಗೆ ಸದ್ಯ 1.5 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಪಾರ್ಕ್‌ನಲ್ಲಿ ವಿವಿಧ ಬಗೆಯ ಸಸಿಗಳು, ವರ್ಣರಂಜಿತವಾದ ಎರಡು ಜಲಪಾತಗಳು ಹಾಗೂ ಚಿಕ್ಕ ಪುಟ್ಟ ಪ್ರಾಣಿಗಳನ್ನು ನೋಡುವ ವ್ಯವಸ್ಥೆ ಇರಲಿದ್ದು, ಜತೆಗೆ 200 ಮೀಟರ್ ಸಾರ್ವಜನಿಕರು ಸಂಚಾರ ಮಾಡಲು ನಿಸರ್ಗ ಸಂಚಾರ ಮಾಡಲಾಗಿದೆ. ಈ 200 ಮೀಟರ್ ರಸ್ತೆಯಲ್ಲಿ ಸುತ್ತಲು ಇದು ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿದೆ. ನಗರದ ಗದ್ದಲದಿಂದ ದೂರವಿರುವ ಈ ತಾಣವು, ಪ್ರಕೃತಿಯ ಮಡಿಲಿನಲ್ಲಿ ನಿಂತು ನಗರದ ವಿಸ್ತಾರವನ್ನು ವಿಕ್ಷೇಣೆ ಮಾಡಬಹುದಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಟ್ರೀ ಪಾರ್ಕ್ ಯೋಜನೆಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಚಾಲನೆ ನೀಡಿದ್ದರು. ಪ್ರಸ್ತುತ ಶೇಕಡಾ 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ವರ್ಷ ಅಂತ್ಯದಲ್ಲಿ ಸಾರ್ವಜನಿಕರ ಬಳಕೆಗೆ ಸಿದ್ಧವಾಗಲಿದೆ. ಜತೆಗೆ ಮಂತ್ರಾಲಯ ಹಾಗೂ ಶ್ರೀಶೈಲಕ್ಕೆ ಹೋಗುವ ಪ್ರವಾಸಿಗಳಗಳಿಗೆ ವಿಶ್ರಾಂತಿ ಪಡೆದಯಲು ಅನುಕೂಲವಾಗಲಿದೆ.
ರಾಜೇಶ ನಾಯಕ್ ವಲಯ ಅರಣ್ಯ ಅಧಿಕಾರಿ ಅರಣ್ಯ ಇಲಾಖೆ ರಾಯಚೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net