ಪರಿಸರ ಸಂರಕ್ಷಣೆಗೆ ಮುಂದಾಗಿ

ಲಿಂಗಸುಗೂರು ಅರಣ್ಯ ಇಲಾಖೆಯ ನರ್ಸರಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಮೂಡಿಸಲಾಯಿತು. ವಲಯ ಅರಣ್ಯಾಧಿಕಾರಿ ಭೀಮರಾಯ ಶಿಳ್ಳೆಕ್ಯಾತ, ಉಪ ವಲಯ ಅಧಿಕಾರಿ ರಾಮಣ್ಣ, ಮುಖ್ಯಶಿಕ್ಷಕ ಮಹಾಂತೇಶ ಇದ್ದಲಗಿ ಇತರರಿದ್ದರು.
ಲಿಂಗಸುಗೂರು ಅರಣ್ಯ ಇಲಾಖೆಯ ನರ್ಸರಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಮೂಡಿಸಲಾಯಿತು. ವಲಯ ಅರಣ್ಯಾಧಿಕಾರಿ ಭೀಮರಾಯ ಶಿಳ್ಳೆಕ್ಯಾತ, ಉಪ ವಲಯ ಅಧಿಕಾರಿ ರಾಮಣ್ಣ, ಮುಖ್ಯಶಿಕ್ಷಕ ಮಹಾಂತೇಶ ಇದ್ದಲಗಿ ಇತರರಿದ್ದರು.
Published on
ಲಿಂಗಸುಗೂರು: ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಬೆಳೆಸುವ ಮೂಲಕ ಪರಿಸರ ಉಳಿಸುವ ಮನೋಭಾವ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಭೀಮರಾಯ ಶಿಳ್ಳೆಕ್ಯಾತ ಹೇಳಿದರು.
ಪಟ್ಟಣದ ಅರಣ್ಯ ಇಲಾಖೆಯ ನರ್ಸರಿ ಸಸ್ಯ ಕ್ಷೇತ್ರದಲ್ಲಿ ಮಂಗಳವಾರ ಸರ್ಕಾರಿ ಪ್ರೌಢ ಶಾಲೆಯ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಘಟಕದ ವಿದ್ಯಾರ್ಥಿಗಳು ಶೈಕ್ಷಣಿಕ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು. 
ಮನುಷ್ಯ ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡುತ್ತಿದ್ದಾನೆ. ಇದರಿಂದ ಜೀವರಾಶಿಗಳ ಮೇಲೆ ಅನೇಕ ರೀತಿಯ ವ್ಯತಿರಿಕ್ತ ದುಷ್ಪರಿಣಾಮಗಳು ಬೀರುತ್ತಿವೆ. ಈ ಕುರಿತು ಯುವ ಪೀಳಿಗೆ ಅರ್ಥಮಾಡಿಕೊಂಡು ಪರಿಸರ ಉಳಿವಿಗಾಗಿ ಶ್ರಮಿಸಬೇಕು ಎಂದ ಅವರು, ಶಾಲಾ ಹಂತದಲ್ಲಿ ಪರಿಸರ ಜಾಗೃತಿ ಮೂಡಿಸಲು ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಸ್ಥಾಪನೆ ಮಾಡಿಕೊಂಡು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. 
ಉಪ ವಲಯ ಅರಣ್ಯಾಧಿಕಾರಿ ರಾಮಣ್ಣ ನರ್ಸರಿ, ಗಿಡಗಳ ನಿರ್ವಹಣೆ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಮಹಾಂತೇಶ ಇದ್ದಲಗಿ, ದೈಹಿಕ ಶಿಕ್ಷಣ ಶಿಕ್ಷಕ ಸಂಗಪ್ಪ ಅಡವಿಬಾವಿ, ಶಿಕ್ಷಕ ಬಸವರಾಜ ಪಾಟೀಲ್, ಮಲಕಾಜಿ, ಸಿದ್ದಮ್ಮ ಪಾಟೀಲ್, ಗೋಪಿಚಂದ, ಅರಣ್ಯ ಇಲಾಖೆಯ ಕಮಲಮ್ಮ, ವೀರೇಶ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net