

ಪ್ರಮುಖ ಮುಖ್ಯಾಂಶಗಳು
ಹೇರುಂಡಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಜಾಗೃತಿ ಹಾಗೂ ಜಾಬ್‌ಕಾರ್ಡ್ ಮೇಳದಲ್ಲಿ ಮಾತನಾಡಿದರು. ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಕೂಲಿಕಾರರಿಗೆ ಜಾಬ್‌ಕಾರ್ಡ್ ವಿತರಿಸಲು ಮೇಳ ಆಯೋಜಿಸಲಾಗಿದೆ. ಯೋಜನೆಯಡಿ ಅರ್ಹರು 125 ದಿನ ಕೆಲಸ ಮಾಡಬಹುದು. ಕೂಲಿ ಮೊತ್ತವನ್ನೂ ಹೆಚ್ಚಿಸಲಾಗಿದ್ದು, ವಿವಿಧ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಜಾಬ್‌ಕಾರ್ಡ್ ಹೊಂದಿರದ ಅರ್ಹ ಫಲಾನುಭವಿಗಳು ನಮೂನೆ-1ರಲ್ಲಿ ಅಗತ್ಯ ಮಾಹಿತಿ ತುಂಬಿ ಗ್ರಾಪಂಗೆ ಸಲ್ಲಿಸಬೇಕು ಎಂದು ಹೇಳಿದರು.