ಜು.25 ಮತ್ತು 26 ರಂದು ಮೂರನೇ ಬೃಹತ್ ಬಸವ ಉತ್ಸವ

ಸಿದ್ರಾಮಪ್ಪ
ಸಿದ್ರಾಮಪ್ಪ
Published on
ರಾಯಚೂರು
ರಾಷ್ಟ್ರೀಯ ಬಸವದಳದಿಂದ ಜು.25 ಮತ್ತು 26 ರಂದು ನಗರದ ಗಂಜ ಕಲ್ಯಾಣ ಮಂಟಪದಲ್ಲಿ ಮೂರನೇ ಬೃಹತ್ ಬಸವ ಉತ್ಸವ ಆಯೋಜಿಸಲಾಗಿದೆಂದು ಬಸವದಳದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳ ಈ ಉತ್ಸವವನ್ನು ಬೆಂಗಳೂರಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠ ಬಸವ ಗಂಗೋತ್ರಿ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ, ಬಸವಕಲ್ಯಾಣದ ಗುಣತೀರ್ಥವಾಡಿ ಬಸವ ಮಹಾಮನೆ ಮಹಾಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ಚಿಕ್ಕಮಗಳೂರು ಜಯಬಸವ ವನದ ಶ್ರೀ ಮಹಾಶಿವಶರಣ ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಬಳ್ಳಾರಿ ಬಿಷಪ್ ರೆವಡೆಂಟ್ ಹೆನ್ರಿ ಡಿಸೋಜಾ, ಸತೂರು ಸೂಫಿ ಸಂತ ಸೈಯದ್ ಅಬ್ದುಲ್ ರಜಾಕ್, ಇಲಕಲ್ ಪ್ರವಚನಕಾರ ಲಾಲ್‌ಹುಸೇನ ಸಾಬ ಕಂದಕಲ್, ಚಿಕ್ಕಮುನಹಳ್ಳಿ ಸಿದ್ದಾರೂಢ ಮಠದ ಶ್ರೀ ಶಿವಪುತ್ರ ಸ್ವಾಮೀಜಿ ವಹಿಸಲಿದ್ದಾರೆ.
ಧ್ವಜಾರೋಹಣವನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ನೇರವೆರಿಸಲಿದ್ದಾರೆ.
ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವೆರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಸಚಿವ ಎನ್.ಎಸ್.ಬೋಸರಾಜು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ಬಾದರ್ಲಿ, ಹಂಪಯ್ಯನಾಯಕ, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಸೇರಿ ಅನೇಕರು ಅಗಮಿಸಲಿದ್ದಾರೆ.

ಸಂಜೆ 7.30ಕ್ಕೆ ಗೃಹಸ್ಥ ಜಂಗಮರ ಸಮಾವೇಶ ನಡೆಯಲಿದೆ. ನಿವೃತ್ತ ಕೆಎಎಸ್ ಅಧಿಕಾರಿ ಎಸ್.ದಿವಾಕರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹುಬ್ಬಳ್ಳಿಯ ಸಚಿ ದಾನಂದಪ್ರಭು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಸವ ಮಾರ್ಗ ಪ್ರತಿಷ್ಠಾನದ ವಿಶ್ವರಾಧ್ಯ ಸತ್ಯಂಪೇಟೆ, ಬಸವರಾಜ ಕುಮಾರ ಪಾಟೀಲ್ ಬೀದರ, ಕೊಪ್ಪಳದ ವೀರಣ್ಣ ಕೋರ್ಲಳ್ಳ, ಜಗದೇವಿಜೆಟ್ಟಿ ಆಗಮಿಸಲಿದ್ದಾರೆ. ರಾತ್ರಿ 9.30ಕ್ಕೆ ಕಲ್ಯಾಣ ಕ್ರಾಂತಿಯ ಮುನ್ನುಡಿ ನಾಟಕ ಪ್ರದರ್ಶನವಾಗುತ್ತದೆ ಎಂದರು.
ಜು.26 ರಂದು ಶ್ರೀ ಗುರು ಬಸವ ಪೂಜೆ ಮತ್ತು ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಲಿದ್ದು, ಡಾ.ಚನ್ನಬಸವಾನಂದ ಸ್ವಾಮೀಜಿ ನಡೆಸಿಕೊಡಲಿದ್ದಾರೆ. ಬೆಳಗ್ಗೆ 8.30ಕ್ಕೆ ಬಸವ ಪಥ ಸಂಚಲನ ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಲಿದೆ. ಬೆಳಿಗ್ಗೆ 10.30ಕ್ಕೆ ಶರಣೆಯರ ಸಮಾವೇಶ ನಡೆಯಲಿದೆ.
ದಿವ್ಯ ಸಾನಿಧ್ಯವನ್ನು ಬೀದರ ಬಸವ ಮಂಟಪದ ಶ್ರೀ ಸದ್ಗುರು ಮಾತದೆ ಸತ್ಯಾದೇವಿವಹಿಸಿಕೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಈರಪ್ಪಗೌಡ ಯರಮರಸ್, ಶಂಶಾಲಂ, ಸೂಗುರೆಡ್ಡಿ, ಭೀಮಣ್ಣ, ಸತ್ಯನಾರಾಯಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net