ಪಾಲಿಶ್ ನೆಪದಲ್ಲಿ ಚಿನ್ನ ದೋಚಿದ ಕಳ್ಳರು

ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಆಶಾದೇವಿ.
ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಆಶಾದೇವಿ.
Published on
ಲಿಂಗಸುಗೂರು: ಪಟ್ಟಣದ ಎಸ್‌ಬಿಎಚ್ ಕಾಲಯಲ್ಲಿ ಶುಕ್ರವಾರ ಚಿನ್ನಾಭರಣ ಉಚಿತವಾಗಿ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ 5 ತೊಲೆಯ ನಾಲ್ಕು ಚಿನ್ನದ ಬಳೆಗಳನ್ನು ಇಬ್ಬರು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಪಟ್ಟಣದ ಆಶಾದೇವಿ ಚಿನ್ನ ಕಳೆದುಕೊಂಡವರು. ಡಾ.ಪಂಪಣ್ಣ ಜಂತಗಲ್ಲ, ಪತ್ನಿ ಆಶಾದೇವಿ ಇಬ್ಬರೇ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆ ತೆರೆದ ಡಾ.ಪಂಪಣ್ಣ ಜಂತಗಲ್ಲ ಬೆಳಗ್ಗೆ 10 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದಾರೆ. ಇದನ್ನು ಗಮನಿಸಿದ ಕಳ್ಳರು, ಮಧ್ಯಾಹ್ನ 12 ಗಂಟೆಗೆ ಬೈಕ್‌ನಲ್ಲಿ ಮನೆಗೆ ಬಂದು ಮೊದಲಿಗೆ ಹಿತ್ತಾಳೆ, ತಾಮ್ರ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ್ದಾರೆ. 
ಮಹಿಳೆಯು ಕೈಯಲ್ಲಿದ್ದ 4 ಚಿನ್ನದ ಬಳೆಗಳನ್ನು ಪಾಲಿಶ್ ಮಾಡುವಂತೆ ಕೊಟ್ಟಿದ್ದಾರೆ. 15 ನಿಮಿಷ ಪಾತ್ರೆಯಲ್ಲಿ ನೀರು ಹಾಕಿ ಕಾಯಿಸುವುದಾಗಿ ಹೇಳಿ ಗ್ಯಾಸ್ ಒಲೆಯ ಮೇಲೆ ಪಾತ್ರೆಯಲ್ಲಿ ಬಳೆಗಳನ್ನು ಹಾಕಿದ್ದಾರೆ. ಈ ವೇಳೆ ಮಹಿಳೆಯ ಗಮನ ಬೇರೆ ಕಡೆ ಸೆಳೆದು ಚಿನ್ನ ಕದ್ದಿದ್ದಾರೆ. ಮಹಿಳೆ ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ. 
ವಿಷಯ ತಿಳಿದು ಡಿವೈಎಸ್ಪಿ ಹಾಗೂ ಪಿಎಸ್‌ಐ ಮನೆಗೆ ಬಂದು ಪರಿಶೀಲನೆ ಮಾಡಿ ದೂರು ನೀಡುವಂತೆ ತಿಳಿಸಿದ್ದಾರೆಂದು ಡಾ.ಪಂಪಣ್ಣ ಜಂತಗಲ್ಲ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net