ಸಾಮೂಹಿಕವಾಗಿ ಹಣತೆ ಹಚ್ಚುವುದರಿಂದ ಪುಣ್ಯ

ಅಡವಿ ಅಮರೇಶ್ವರ ಗ್ರಾಮದ ಶ್ರೀಮಠದಲ್ಲಿ ಬುಧವಾರ ಕಾರ್ತಿಕ ದೀಪೋತ್ಸವಕ್ಕೆ ಯದ್ದಲ್ಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಪ್ರಮುಖರಾದ ತೋಂಟದಾರ್ಯ ಸ್ವಾಮೀಜಿ, ಶಾಂತಮೂರ್ತಿ ಸ್ವಾಮೀಜಿ ಇತರರಿದ್ದರು.
ಅಡವಿ ಅಮರೇಶ್ವರ ಗ್ರಾಮದ ಶ್ರೀಮಠದಲ್ಲಿ ಬುಧವಾರ ಕಾರ್ತಿಕ ದೀಪೋತ್ಸವಕ್ಕೆ ಯದ್ದಲ್ಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಪ್ರಮುಖರಾದ ತೋಂಟದಾರ್ಯ ಸ್ವಾಮೀಜಿ, ಶಾಂತಮೂರ್ತಿ ಸ್ವಾಮೀಜಿ ಇತರರಿದ್ದರು.
Published on
ಮಾನ್ವಿ: ದೀಪ ಬೆಳಗುವುದರಿಂದ ಕತ್ತಲೆ ಹೋಗಿ ಜ್ಞಾನದ ಬೆಳಕು ಮೂಡುತ್ತದೆ ಎಂದು ಯದ್ದಲ್ಲದೊಡ್ಡಿ ಸುವರ್ಣಗಿರಿ ವಿರಕ್ತಮಠ ಮಹಾಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಅಡವಿ ಅಮರೇಶ್ವರ ಮಠದಲ್ಲಿ ಬುಧವಾರ ಕಾರ್ತಿಕ ಮಾಸದ ಅಂಗವಾಗಿ 70ನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. 
ಅಡವಿ ಅಮರೇಶ್ವರ ಕ್ಷೇತ್ರ ಭಕ್ತರಿಗೆ ಇಷ್ಟರ್ಥಾಗಳನ್ನು ಕರುಣಿಸುವ ಜಾಗೃತ ಸ್ಥಳವಾಗಿದೆ. ಕಾರ್ತಿಕ ಮಾಸದಲ್ಲಿ ಸಾಮೂಹಿಕವಾಗಿ ಹಣತೆಗಳನ್ನು ಹಚ್ಚಿದರೆ ಪುಣ್ಯಫಲಗಳು ದೊರೆಯುತ್ತವೆ ಎಂದರು. 
ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಸ್ವಾಮೀಜಿ, ಶಾಂತಮೂರ್ತಿ ಸ್ವಾಮೀಜಿ ಇತರರಿದ್ದರು. ಬೆಳಗ್ಗೆ ಅಡವಿ ಅಮರೇಶ್ವರ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಅಡವಿ ಅಮರೇಶ್ವರಸ್ವಾಮಿಯ ಉಚ್ಚಾಯ ಮಹೋತ್ಸವ ವೈಭವದಿಂದ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net