ಮೊಬೈಲ್ ಅಲರ್ಟ್ ಮೆಸೇಜ್‌ನಿಂದ ತಪ್ಪಿದ ಕಳ್ಳತನ

ರಂಗಾಪುರಕ್ಯಾಂಪ್‌ನಲ್ಲಿ ಮನೆ ಕಳ್ಳತನಕ್ಕೆ ಬಂದಿದ್ದ ಮುಸುಕುಧಾರಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
ರಂಗಾಪುರಕ್ಯಾಂಪ್‌ನಲ್ಲಿ ಮನೆ ಕಳ್ಳತನಕ್ಕೆ ಬಂದಿದ್ದ ಮುಸುಕುಧಾರಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
Published on
ಸಿಂಧನೂರು: ತಾಲೂಕಿನ ರಂಗಾಪುರಕ್ಯಾಂಪ್‌ನ ಮನೆಯೊಂದರಲ್ಲಿ ನಡೆಯಬೇಕಿದ್ದ ಕಳ್ಳತನ ಸಿಸಿ ಕ್ಯಾಮರಾ ನೀಡಿದ ಮೊಬೈಲ್ ಅಲರ್ಟ್‌ನಿಂದ ತಪ್ಪಿದೆ.
ಕ್ಯಾಂಪಿನ ನಿವಾಸಿ ಮದ್ದಪಾಟಿ ಸುಬ್ಬಾರಾವ್ ಎನ್ನುವರ ಮನೆಯಲ್ಲಿ ಕಳವಿಗೆ ಯತ್ನಿಸಲಾಗಿದೆ. ಸುಬ್ಬಾರಾವ್ ಅವರು ಎರಡು ತಿಂಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ಎಲ್ಲವನ್ನೂ ಗಮನಿಸಿದ್ದ ಕಳ್ಳ ಫೆ.5ರಂದು ಮಧ್ಯರಾತ್ರಿ 12 ಗಂಟೆಗೆ ಮುಸುಕುಧರಿಸಿ ಮನೆ ಕಳ್ಳತನಕ್ಕೆ ಬಂದಿದ್ದಾನೆ. ಮನೆ ಬೀಗ ಮುರಿದು ಒಳ ಹೋಗಲು ಯತ್ನಿಸಿದ್ದಾನೆ. 
ಈ ವೇಳೆಗೆ ಆಸ್ಟ್ರೇಲಿಯಾದಲ್ಲಿರುವ ಮದ್ದಪಾಟಿ ಸುಬ್ಬಾರಾವ್ ಮೊಬೈಲ್ ಸಿಸಿ ಕ್ಯಾಮರಾ ಆ್ಯಪ್‌ಗೆ ಅಲರ್ಟ್ ಮೆಸೇಜ್ ಬಂದಿದೆ. ಸುಬ್ಬಾರಾವ್ ತೆಗೆದು ನೋಡಿದಾಗ, ಕಳ್ಳನ ಚಲನವಲನ ಗಮನಿಸಿ, ಪಕ್ಕದ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. 
ನೆರೆಹೊರೆಯವರು ಬರುತ್ತಿದ್ದಂತೆ ಕಳ್ಳ ಪರಾರಿಯಾಗಿದ್ದಾನೆ. ಶುಕ್ರವಾರ ಗ್ರಾಮೀಣ ಠಾಣೆಯ ಪೊಲೀಸರು ತೆರಳಿ, ಪರಿಶೀಲನೆ ನಡೆಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net