ಯರಡೋಣ ಚೌಡೇಶ್ವರಿ ಜಾತ್ರೋತ್ಸವ ಸಂಪನ್ನ

ಲಿಂಗಸುಗೂರು ಸಮೀಪ ಯರಡೋಣ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿ ರಥೋತ್ಸವ ಜರುಗಿತು.
ಲಿಂಗಸುಗೂರು ಸಮೀಪ ಯರಡೋಣ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿ ರಥೋತ್ಸವ ಜರುಗಿತು.
Published on
ಲಿಂಗಸುಗೂರು: ಯರಡೋಣ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿ ಜಾತ್ರೋತ್ಸವ ಅಂಗವಾಗಿ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. 
ಬೆಳಗ್ಗೆ ಗ್ರಾಮದೇವತೆ ಚೌಡೇಶ್ವರಿ ದೇವಿಗೆ ಕುಂಕುಮ, ಚಂದನ ಅಭಿಷೇಕ, ವಸ್ತ್ರ ಮತ್ತು ಹೂಗಳ ಅಲಂಕಾರ ಮಾಡಲಾಯಿತು. ನಂತರ ಮಹಿಳೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. 
ಸಾಮೂಹಿಕ ವಿವಾಹ ನಂತರ ಸಂಜೆ ರಥೋತ್ಸವ ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಶ್ರೀ ಅಮರೇಶ್ವರ ಗುರು ಗಜದಂಡ ಸ್ವಾಮಿಗಳು ರಥದಲ್ಲಿ ಆಸೀನರಾದ ನಂತರ ಭಕ್ತರು ರಥ ಎಳೆದು ಭಕ್ತಿ ಪರಾಕಾಷ್ಠೆ ಮೆರೆದರು. 
ಯರಡೋಣ ಮುರುಗೇಂದ್ರ ಸ್ವಾಮಿಗಳು, ಪ್ರಮುಖರಾದ ಸಿದ್ದನಗೌಡ, ಅಂಬಣ್ಣ, ಸಂಗಣ್ಣ, ಹನುಮಂತ, ಅಮರೇಗೌಡ, ಶರಣಬಸವ, ಶಂಕ್ರಯ್ಯ ಸ್ವಾಮಿ, ಗುಂಡಪ್ಪ, ಮಲ್ಲಪ್ಪ, ಸಣ್ಣ ಹುಸೇನಪ್ಪ, ಅಮರೇಶ, ನಾಗರಾಜ, ರಾಜ ಮಹ್ಮದ, ದೇವೇಂದ್ರಗೌಡ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net