ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ಸಂಪನ್ನ

ಕುಷ್ಟಗಿಯ ರಾಯರ ಮಠದಲ್ಲಿ ಜಯತೀರ್ಥರ ಆರಾಧನೆ ನಿಮಿತ್ತ ಲಘು ರಥೋತ್ಸವ ಜರುಗಿತು.
ಕುಷ್ಟಗಿಯ ರಾಯರ ಮಠದಲ್ಲಿ ಜಯತೀರ್ಥರ ಆರಾಧನೆ ನಿಮಿತ್ತ ಲಘು ರಥೋತ್ಸವ ಜರುಗಿತು.
Published on

ಕುಷ್ಟಗಿ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ಮದ್ ಜಯತೀರ್ಥರ (ಟೀಕಾರಾಯರ) ಆರಾಧನಾ ಮಹೋತ್ಸವ ನಿಮಿತ್ತ ಮಠದಲ್ಲಿ ಹೋಮ, ಹವನ, ಲಘು ರಥೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 

ಆ. 2 ರಿಂದ 4ರವರೆಗೆ ನಡೆದ ಕಾರ್ಯಕ್ರಮದಲ್ಲಿ ಸುಪ್ರಭಾತ, ಟೀಕಾರಾಯರ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಅಲಂಕಾರ ಭಜನೆ, ಮಹಾ ಮಂಗಳಾರತಿ ಹಾಗೂ ಜಯತೀರ್ಥರ ಪ್ರಿತ್ಯಾರ್ಥವಾಗಿ ಲೋಕಕಲ್ಯಾಣಕ್ಕಾಗಿ ಬ್ರಹ್ಮ ಸೂತ್ರ ಹೋಮ ನೆರವೇರಿಸಲಾಯಿತು. 

ಮಾದಿನೂರಿನ ಪಂ.ವಸಂತಾಚಾರ್ ಪೂಜಾರ, ಹನುಮಸಾಗರದ ಪಂ.ಪ್ರಲ್ಹಾದ ಆಚಾರ್ ಪೂಜಾರ, ರಾಯಚೂರಿನ ಪಂ.ಸರ್ವೋತ್ತಮಾಚಾರ್ ಜೋಶಿ ವಿಶೇಷ ಉಪನ್ಯಾಸ ಜರುಗಿತು. ಗೋಪೂಜೆ, ಧ್ವಜಾರೋಹಣ, ಧಾನ್ಯ ಪೂಜೆ, ಮಹಾಪ್ರಸಾದದ ನಂತರ ಟೀಕಾರಾಯರ ಲಘ ರಥೋತ್ಸವದೊಂದಿಗೆ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net