ಅಂಜುಮಾನ ಸಂಸ್ಥೆಯ ಕಾರ್ಯ ಅರ್ಥಪೂರ್ಣ - ಬಾದರ್ಲಿ

ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಸಂಜೆ ಅಂಜುಮನ್- ಎ - ರಾಯಚೂರು ಸಂಸ್ಥೆ ವತಿಯಿಂದ ಸೋಮವಾರ ಸಂಜೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಶಾಸಕ ಹಂಪನಗೌಡ ಬಾದರ್ಲಿ,ಪ್ರಾಧ್ಯಾಪಕ ಡಾ.ಸೈಯದ ಮಿನ್ಹಾಜುಲ್ ಹಸ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಸಂಸ್ಥೆಯ ಸಂಚಾಲಕ ಹ್ಯಾರಿಸ್ ಸಿದ್ದಿಖಿ, ಪ್ರಮಖರಾದ ಡಾ.ರಝಾಕ್ ಉಸ್ತಾದ್, ಅಬ್ದುಲ್ ಕರೀಂ, ಕೆ.ಅಸ್ಲಾಂ ಪಾಷ, ಮೌಲಾನಾ ಸೈಯದ ಅಬ್ದುಲ್ ಲತೀಫ ಲೌಬಲಿ ಸಾಹೇಬ್, ಸೈಯದ ತಾರೀಖ ಹಸನ್ ರಿಜ್ವಿ ವಕೀಲರು, ಸೈಯದ ಅಮೀನುಲ್ ಹಸನ್ ಇದ್ದರು.

Published on
ರಾಯಚೂರು
ವೈವಿದ್ಯತೆಯ ಜೊತೆಗೆ ಭಾವೈಕ್ಯತೆಯಿಂದ ಕೂಡಿದ ದೇಶ ನಮ್ಮದಾಗಿದೆ. ಅಲ್ಪಸಂಖ್ಯಾತರು ಇತ್ತೀಚಿಗೆ ಶೈಕ್ಷಣಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ಮುಂದುವರೆ ಯುತ್ತಿರುವದು ಸಂತೋಷದ ವಿಷಯವಾಗಿದೆಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂಜುಮನ್- ಎ - ರಾಯಚೂರು ಸಂಸ್ಥೆ ವತಿಯಿಂದ ಸೋಮವಾರ ಸಂಜೆ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ನಮ್ಮ ಸರ್ಕಾರ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಮೊದಲನೇ ವರ್ಷದಲ್ಲಿ ನಾಲ್ಕು ಸಾವಿರ ಕೋಟಿ, ಎರಡನೇ ವರ್ಷದಲ್ಲಿ ಐದು ಸಾವಿರ ಕೋಟಿ ಮತ್ತು ಪ್ರಸಕ್ತ ಸಾಲಿನಲ್ಲಿ ಆರುವರೆ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ. ಜತೆಗೆ 150 ಮೌಲಾನ ಅಜಾದ ಆಂಗ್ಲ ಮಾದ್ಯಮ ಶಾಲೆಗಳಿಗೆ ಮಂಜೂರಾತಿ ನೀಡಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ ಹಾಗೂ ನೂರಾರು ವಸತಿ ನಿಲಯಗಳನ್ನು ಸರ್ಕಾರ ಮಂಜೂರು ಮಾಡಿದೆ. ಸರ್ಕಾರ ಅಲ್ಪಸಂಖ್ಯಾತರ ಪ್ರಗತಿಗಾಗಿ ಇಷ್ಟೆಲ್ಲಾ ಸೌಕರ್ಯ ಒದಗಿಸುತ್ತಿದ್ದರೂ, ತೃಪ್ತಿಕರವಾದ ಅಭಿವೃದ್ಧಿ ಆಗಿಲ್ಲ. ಈ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇದಕ್ಕೆ ಕಾರಣ ಹುಡುಕದೆ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನ ಸದುಪಯೋಗ ಪಡಿಸಿಕೊಂಡು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರು.

ಪ್ರಾಧ್ಯಾಪಕ ಡಾ.ಸೈಯದ ಮಿನ್ಹಾಜುಲ್ ಹಸ್ ಮಾತನಾಡಿ, ವಿದ್ಯಾರ್ಥಿಗಳು ತಂದೆ ತಾಯಿಗಳಿಗೆ ವಿಧೇಯರಾಗಿರಬೇಕು. ಶಿಕ್ಷಕರ ಮಾತನ್ನು ಕೇಳಬೇಕು. ಉನ್ನತ ಶಿಕ್ಷಣ ಪಡೆಯುವಲ್ಲಿ ಯಾವುದೇ ಕಾರಣಕ್ಕೂ ಹಿಂಜರಿ ಯಬಾರದು ಎಂದು ಹೇಳಿದರು. ಉನ್ನತ ಶಿಕ್ಷಣಕ್ಕೆ ಬೇರೆ ಊರಿಗೆ ಹೋಗುವಾಗ ಕಿಳರಿಮೆ ಇಟ್ಟು ಕೊಳ್ಳಬಾರದು. ನೀವು ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವ ಭಾವನೆ ಇಟ್ಟುಕೊಂಡು ಅಧ್ಯಯನ ಮಾಡಬೇಕು ಎಮದು ಕಿವಿ ಮಾತು ಹೇಳಿದರು.

ನಂತರ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಸಂಸ್ಥೆಯ ಸಂಚಾಲಕ ಹ್ಯಾರಿಸ್ ಸಿದ್ದಿಖಿ, ಪ್ರಮಖರಾದ ಡಾ.ರಝಾಕ್ ಉಸ್ತಾದ್, ಅಬ್ದುಲ್ ಕರೀಂ, ಕೆ.ಅಸ್ಲಾಂ ಪಾಷ, ಮೌಲಾನಾ ಸೈಯದ ಅಬ್ದುಲ್ ಲತೀಫ ಲೌಬಲಿ ಸಾಹೇಬ್, ಸೈಯದ ತಾರೀಖ ಹಸನ್ ರಿಜ್ವಿ ವಕೀಲರು, ಸೈಯದ ಅಮೀನುಲ್ ಹಸನ್ , ಶೇಖ ಮಹಿಬೂಬ, ಸೈಯದ ಜುಬೇರ ಮೋಹಿಯುದ್ದೀನ, ಡಾ.ಬಂದೇನವಾಜ್ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net