ಮಂತ್ರಾಲಯದ ಹೊಟೆಲ್ಗಳಿಗರ ಯುದ್ಧದ ಬಿಸಿ

ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಸಿಲಿಂಡರ್ ಅಭಾವದಿಂದ ಮಂತ್ರಾಲಯದ ಹೋಟೆಲ್‌ವೊಂದು ಬಂದ್ ಮಾಡಲಾಗಿವುದು.
ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಸಿಲಿಂಡರ್ ಅಭಾವದಿಂದ ಮಂತ್ರಾಲಯದ ಹೋಟೆಲ್‌ವೊಂದು ಬಂದ್ ಮಾಡಲಾಗಿವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಿಲಿಂಡರ್ ಅಭಾವಕ್ಕೆ ಬೆಚ್ಚಿದ ಮಾಲಿಕರು
  • ಭಕ್ತರಿಗೆ ತೊಂದರೆ ಸಾಧ್ಯತೆ
  • ಭಕ್ತರ ಆಗಮನ ನೋಡಿ ತಯಾರಿ
ರಾಯಚೂರು ದೇಶದ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯಕ್ಕೂ ಇರಾನ್ ಮೇಲಿನ ದಾಳಿಯಿಂದಾದ ತೈಲೋತ್ಪನ್ನಗಳ ಕೊರತೆ ಅಭಾವದ ಬಿಸಿ ತಟ್ಟಲಾರಂಭಿಸಿದೆ. ರಾಯರ ಕ್ಷೇತ್ರದಲ್ಲಿರುವ ಹೊಟೆಲ್ ಗಳಲ್ಲಿ ತಿಂಡಿ ಹಾಗೂ ಊಟಕ್ಕೆ ಯುದ್ಧದ ಬಿಸಿ ನಿಧಾನವಾಗಿ ತಟ್ಟುತ್ತಿದೆ. ಹೊಟೆಲ್ ಮಾಲಿಕರು ಅಳೆದು ತೂಗಿ ಅಡುಗೆ ಅನಿಲ ಬಳಸಲು ಮುಂದಾಗಿದ್ದಾರೆ.
ಹೌದು. ಗಲ್ಫ್ ರಾಷ್ಟ್ರಗಳಲ್ಲಿ ನಡೆದಿರುವ ಯುದ್ಧದಿಂದಾಗಿ ಮಂತ್ರಾಲಯದಲ್ಲಿರುವ ಹೊಟೇಲ್‌ಗಳಿಗೆ ಕಮರ್ಷಿಯಲ್ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಏರುಪೇರಾಗಿದ್ದು, ರಾಯರ ಭಕ್ತರಿಗೆ ಎಚ್ಚರಿಕೆಯಿಂದ ಸೇವೆ ಒದಗಿಸುವಂತಾಗಿದೆ. ಊಟ ತಿಂಡಿ ಸದ್ಯಕ್ಕೆ ದಿನವಿಡೀ ಕೆಲ ಹೊಟೆಲ್‌ಗಳಲ್ಲಿ ನೀಡಲು ಮಾಲಿಕರು ಹಿಂದೇಟು ಹಾಕುತ್ತಿದ್ದಾರೆ.
ಸಿಲಿಂಡರ್ ಪೂರೈಕೆ-
ಮಂತ್ರಾಲಯದಲ್ಲಿ ಕ್ಷೇತ್ರದಲ್ಲಿ ಸುಮಾರು 150 ರಿಂದ 200 ಕ್ಕೂ ಅಧಿಕ ಹೊಟೆಲ್‌ಗಳು ಇವೆ. ಇದರಲ್ಲಿ ಶೇ. 50 ರಷ್ಟು ಹೋಟೆಲ್‌ಗಳಲ್ಲಿ ಸಿಲಿಂಡರ್ ಬಳಕೆಯಿಂದ ತಿಂಡಿಗಳನ್ನು ತಯಾರು ಮಾಡುತ್ತಾರೆ. ಆದರೆ ಒಂದು ವಾರದಿಂದ ಒಂದು ಹೋಟೆಲ್‌ಗೆ ಕೇವಲ ನಾಲ್ಕು ವಾಣಿಜ್ಯ ಸಿಲಿಂಡರ್ ನೀಡಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಂಡಲದ ಅನೇಕ ತೈಲ ಕಂಪನಿಗಳು 70 ದಿನಗಳವರೆಗೆ ಅಡುಗೆ ಅನಿಲ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದಿದ್ದವು. ಆದರೆ, ಏಕಾಏಕಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ನಿಲ್ಲಿಸಿರುವುದರಿಂದ ತುಂಬಾ ತೊಂದರೆಯಾಗಿದೆ. ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರವು 1800 ರೂ. ಇದೆ. ಆದರೆ, ಈಗಾಗಲೇ ಬ್ಲಾಕ್ ಮಾರುಕಟ್ಟೆಯಲ್ಲಿ ಸಿಲಿಂಡರ್‌ಗಳ ಬೆಲೆ 2500-2800 ರೂ.ಗಳಿಗೆ ಏರಿಕೆಯಾಗಿದೆಂದು ಮಾಲೀಕರು ರೋಧನೆ ವ್ಯಕ್ತ ಪಡಿಸುತ್ತಿದ್ದಾರೆ.
ಭಕ್ತರ ಆಗಮನ ನೋಡಿ ತಯಾರಿ-
ಬೇಸಿಗೆ ಹಿನ್ನಲೆಯಲ್ಲಿ ವಾರಾಂತ್ಯದ ಗುರುವಾರದಿಂದ ಭಾನುವಾರದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ ಇಂದನ ಕಂಪನಿಗಳು ನೀಡಿರುವ ಸಿಲಿಂಡರ್ ಸಾಕಾಗುವುದಿಲ್ಲ. ಅದರಿಂದ ಜನರು ಆಗಮನ ನೋಡಿ ಬೇಗನೆ ತಯಾರಾಗುವ ತಿಂಡಿಗಳನ್ನು ಮಾತ್ರ ಕ್ಷೇತ್ರದಲ್ಲಿ ತಯಾರು ಮಾಡುತ್ತಿದ್ದಾರೆ.
ಮಠದಲ್ಲಿ ತಿಂಡಿ ಸಿಗಲ್ಲ ಊಟ ಅಷ್ಟೇ-
ಮಠದ ಅನ್ನಪೂರ್ಣ ಭೋಜನ ಶಾಲೇಲಿ ಮಧ್ಯಾಹ್ನ ಹಾಗೂ ರಾತ್ರಿ ಊಟ ದೊರೆಯುತ್ತದೆ. ಗ್ಯಾಸ್ ಅಭಾವದಿಂದಾಗಿ ಹೋಟೆಲ್‌ಗಳನ್ನು ಬೆಳಗ್ಗೆ ಸ್ವಲ್ಪ ಸಮಯ ಮಾತ್ರ ತೆರೆದು, ಮಧ್ಯಾಹ್ನ ಮತ್ತು ಸಂಜೆ ಮುಚ್ಚಲಾಗುತ್ತಿದೆ. ದಿನ ವಿಡೀ ಹೋಟೆಲ್ ತೆರೆದರೆ ಗ್ಯಾಸ್ ಸಾಕಾಗುವುದಿಲ್ಲ ಮತ್ತು ಇದರಿಂದ ವ್ಯಾಪಾರ ಕೆಟ್ಟುಹೋಗುವ ಭೀತಿ ಮಾಲೀಕರಿಗಿದೆ. ಸಾಲುಗಟ್ಟಿ ನಿಂತು ಊಟ ಮಾಡದವರು, ಅವಸರದಲ್ಲಿ ತೆರಳುವವರು ಮಂತ್ರಾಲಯದಲ್ಲಿ ಹೊಟೆಲ್‌ಗಳನ್ನೇ ಅವಲಂಬಿಸಿದ್ದು ಈಗ ನಿಧ್ನಾವಾಗಿ ಯುದ್ಧದ ಕಾರಣಕ್ಕೆ ಸಿಲಿಂಡರ್ ಬಳಕೆಗೆ ಮಾಲಿಕರು ಲೆಕ್ಕ ಹಾಕುವಂತಾಗಿದೆ.
ಅರ್ಧ ದಿನ ಓಪನ್-
ರಾಯರ ಕ್ಷೇತ್ರದಲ್ಲಿನ ಕೆಲ್ ಹೊಟೆಲ್‌ನವರು ದಿನದ ಅರ್ಧ ಭಾಗ ಮಾತ್ರ್ ಓಪನ್ ಇರಿಸಿ ಸೇವೆ ಒದಗಿಸುತ್ತಿವೆ. ಭಕ್ತರ ಸಂಖ್ಯೆ ಹೆಚ್ಚಾಗಿದ್ದರೆ ಒಂದೆರಡು ಗಂಟೆ ಹೆಚ್ಚು ತೆರೆಯುತ್ತಿದ್ದು ಭಕ್ತರ ಆಗಮನ ತಗ್ಗಿದರೆ ಅರ್ಧ ದಿನವೇ ಕೆಲವರು ತೆರೆದಿಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net