ಕೃಷಿಕರು ಒಗ್ಗಟ್ಟಾಗಿದ್ದರಷ್ಟೇ ಹೋರಾಟಕ್ಕೆ ಮಹತ್ವ

ಗುಡಿಹಾಳ ಗ್ರಾಮದಲ್ಲಿ ಏರ್ಪಡಿಸಿದ್ದ ರೈತ ಹೋರಾಟಗಾರ ಅಮರಣ್ಣ ಗುಡಿಹಾಳ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಮಾತನಾಡಿದರು. ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಅಧ್ಯಕ್ಷ ಬಡಗಲಪುರ ನಾಗೇಂದ್ರ, ಹೋರಾಟಗಾರ ಅಮರಣ್ಣ ಗುಡಿಹಾಳ ಪುತ್ರ ಈರಣ್ಣ ಅಂಕಸದೊಡ್ಡಿ ಇತರರಿದ್ದರು.
ಗುಡಿಹಾಳ ಗ್ರಾಮದಲ್ಲಿ ಏರ್ಪಡಿಸಿದ್ದ ರೈತ ಹೋರಾಟಗಾರ ಅಮರಣ್ಣ ಗುಡಿಹಾಳ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಮಾತನಾಡಿದರು. ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಅಧ್ಯಕ್ಷ ಬಡಗಲಪುರ ನಾಗೇಂದ್ರ, ಹೋರಾಟಗಾರ ಅಮರಣ್ಣ ಗುಡಿಹಾಳ ಪುತ್ರ ಈರಣ್ಣ ಅಂಕಸದೊಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಮತ
  • ಮುದಗಲ್ ಗುಡಿಹಾಳ ನುಡಿನಮನ ಕಾರ್ಯಕ್ರಮ
ಮುದಗಲ್: ಪ್ರತಿ ಜೀವಿ ಕೂಡ ಪರಿಸರದ ಸಂರಕ್ಷಣೆ ಮಾಡುವುದರಿಂದ ಕಾಲಕಾಲಕ್ಕೆ ತಕ್ಕಂತೆ ಮಳೆ, ಬೆಳೆ ಪಡೆಯಲು ಸಾಧ್ಯವಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ಸಮೀಪದ ಗುಡಿಹಾಳ ಗ್ರಾಮದಲ್ಲಿ ಏರ್ಪಡಿಸಿದ್ದ ರೈತ ಹೋರಾಟಗಾರ ಅಮರಣ್ಣ ಗುಡಿಹಾಳ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ನಾಲ್ಕು ದಶಕಗಳ ಕಾಲ ರೈತಪರ ಹೋರಾಟ ಮಾಡಿ ತ್ಯಾಗ ಮನೋಭಾವದಿಂದ ನಿಸ್ವಾರ್ಥ ಸೇವೆಗೈಯ್ದು ಇತ್ತೀಚೆಗೆ ನಮ್ಮನ್ನಗಲಿದ ರೈತ ಹೋರಾಟಗಾರ ಅಮರಣ್ಣ ಗುಡಿಹಾಳ ಅವರ ಹಾದಿಯಲ್ಲಿ ನಾವೆಲ್ಲ ಒಗ್ಗಟ್ಟಾಗಿ ರೈತರ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ಪಡೆಯೋಣ.
ರೈತರು ಒಗ್ಗಟ್ಟಾಗಿದ್ದರೆ ಮಾತ್ರ ಹೋರಾಟಕ್ಕೆ ಬೆಲೆ ಬರುತ್ತದೆ. ನಮ್ಮ ಬೆಳೆಗೆ ನಾವೇ ದರ ನಿಗದಿ ಮಾಡುವ ಕಾನೂನು ತರಬೇಕು.ಬಂಡವಾಳಶಾಹಿಗಳ ಹಿಡಿತಕ್ಕೆ ನಾವೆಲ್ಲರೂ ಬಲಿಯಾಗುತ್ತಿದ್ದೇವೆ. ಪ್ರತಿಯೊಂದು ಗ್ರಾಮದ ಕೆರೆಕಟ್ಟೆಗಳನ್ನು ಉಳಿಸಲು ರೈತ ಸಂಘಟನೆಗಳು ಮುಂದಾಗಬೇಕು. ಸರ್ಕಾರದ ಮಟ್ಟದಲ್ಲಿ ಕೆರೆಗಳ ರಕ್ಷಣೆ ಕುರಿತು ಚರ್ಚಿಸಲಾಗುವುದು ಎಂದರು.
ಇರಕಲ್‌ನ ಶಿವಶಕ್ತಿ ಪೀಠ ಬಸವಪ್ರಸಾದ ಶ್ರೀಗಳು, ಹುನಕುಂಟಿಯ ಶರಣಯ್ಯ ತಾತ, ಮಸ್ಕಿ ಶಾಸಕ ಬಸನಗೌಡ ಪಾಟಿಲ್ ತುರ್ವಿಹಾಳ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮಹಿಳಾ ರೈತ ಸಂಘದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಪಾಟೀಲ್, ಪ್ರಮುಖರಾದ ವೀರಭದ್ರಗೌಡ ಪಾಟೀಲ್, ಎಚ್.ಬಿ.ಮುರಾರಿ, ಮಾತನಾಡಿದರು.
ಪ್ರಮುಖರಾದ ಮಲ್ಲಿಕಾರ್ಜುನ ಗೌಡ ಗೊರೇಬಾಳ, ಪಂಪಾಪತಿ ಗುಡಿಹಾಳ, ಬಸವಂತರಾಯ ಕುರಿ, ಪಂಪಣ್ಣ ಮಟ್ಟೂರು, ಮಲ್ಲಿಕಾರ್ಜುನ ಸತ್ಯಂಪೇಟೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net