ಮಾನ್ವಿಯಲ್ಲಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ಕರ್ನಾಟಕ ಜನವೇದಿಕೆ ಸಮಿತಿ ತಾಲೂಕು ಘಟಕ ಮನವಿ ಸಲ್ಲಿಸಿತು. ಸಂಯೋಜಕ ರವೀಂದ್ರ ಜಾನೇಕಲ್, ಪ್ರಮುಖರಾದ ಅಬ್ರಾಹಂ ಪನ್ನೂರು, ಸದಾನಂದ ಪನ್ನೂರು ಇತರರಿದ್ದರು.
ಮಾನ್ವಿ: ವಿಜಯಪುರ ನಗರದಲ್ಲಿ ಸರ್ಕಾರದಿಂದ ಪಿಪಿಪಿ ಮಾದರಿಯಲ್ಲಿ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಖಂಡಿಸಿ ಕರ್ನಾಟಕ ಜನವೇದಿಕೆ ಸಮಿತಿ ತಾಲೂಕು ಘಟಕ ಪಟ್ಟಣದಲ್ಲಿ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರಗೆ ಮನವಿ ಸಲ್ಲಿಸಿತು.
ಸರ್ಕಾರಿ ವೈದ್ಯಕೀಯ ಮಹಾವಿದ್ಯಾಯ ಸ್ಥಾಪನೆಗಾಗಿ ಸಮಿತಿ ಹೋರಾಟ ಮಾಡುತ್ತಿದೆ. ಆದರೆ ಸರ್ಕಾರ ವಿಜಯಪುರ ನಗರದಲ್ಲಿ ಪಿ.ಪಿ.ಪಿ.ಮಾದರಿಯ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ. ಹೋರಾಟ ನಿರತರ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ. ಅಲ್ಲದೆ ಟೆಂಟ್‌ಗಳನ್ನು ಕಿತ್ತು ಹಾಕಿದ್ದಾರೆ. ಕೂಡಲೇ ತಪ್ಪು ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಸಂಯೋಜಕ ರವೀಂದ್ರ ಜಾನೇಕಲ್, ಪದಾಧಿಕಾರಿಗಳಾದ ವಸಂತ ಕೊಟ್ನೆಕಲ್, ದೇವರಾಜ್, ಅಬ್ರಾಹಂ ಪನ್ನೂರು, ಸದಾನಂದ ಪನ್ನೂರು, ಹಂಪಯ್ಯ, ಹುಲಿಗೆಮ್ಮ, ಚಾರ್ಲಿ ಉದ್ಬಾಳ್, ಬಸವರಾಜ ಹರವಿ ಇತರರಿದ್ದರು.