_1771002179172.webp?w=480&auto=format%2Ccompress&fit=max)
_1771002179172.webp?w=480&auto=format%2Ccompress&fit=max)
ರಾಯಚೂರು
ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ಕಾಮಗಾರಿ ಶೇ.31 ರಷ್ಟು ಪ್ರಗತಿಯಲ್ಲಿದ್ದು,ಮುಂದಿನ ಒಂದುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆಂದು ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ವಿಮಾನ ನಿಲ್ದಾಣ ಒಟ್ಟು 322 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ವಿಮಾನ ನಿಲ್ದಾಣ ಯೋಜನೆ ಪೂರ್ಣಗೊಳಿಸಲಾಗುತ್ತದೆ. ಇಲ್ಲಿ ಈಗಾಗಲೇ ಶೇ.31 ಸಾಧನೆ ಕಾಮಗಾರಿ ಸಲ್ಲಿಸುವುದರಲ್ಲಿ ಮುಂದಿನ ಎಲ್ಲಾ ಕಾಮಗಾರಿಗಳು ಕೂಡ ಅದರಲ್ಲಿ ಕೂಡಿರುತ್ತವೆ. ಈ ಹಿಂದೆ ಮಳೆ ಹೆಚ್ಚಾಗಿ ಸುರಿದ ಕಾರಣ ರನ್‌ವೇ ಕೆಲಸಗಳು ಸ್ವಲ್ಪ ತಡ ಆಗಿವೆ. ಕಾರ್ ಪಾರ್ಕಿಂಗ್ ಕೆಲಸ ಪ್ರಗತಿಯಲ್ಲಿದೆ. ಏಗನೂರು ಗ್ರಾಮದಲ್ಲಿನ 30 ಮನೆಗಳು ಹಾಗೂ ಯರಮರಸ್ ದಂಡ್‌ನ 108 ಮನೆಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ 108 ಮನೆ ಇರುವಂತಹ ದಂಡ
ಗ್ರಾಮದ ಜನರಿಗೆ ಆರು ಎಕರೆ, 30 ಮನೆ ಇರು ವಂತಹ ಏಗನೂರು ಗ್ರಾಮದ ಜನರಿಗೆ ನೀಡಲು ಎರಡು ಎಕರೆ ಪ್ರದೇಶದ ಲೇಔಟ್ ಕಾಮಗಾರಿ ಪ್ರಗತಿಯಲ್ಲಿದೆ. ಎರಡುವರೆ ತಿಂಗಳಲ್ಲಿ ಲೇಔಟ್ ಕಾಮಗಾರಿ ಪೂರ್ತಿಯಾಗುತ್ತದೆ ಎಂದರು.
ವಿಮಾನ ನಿಲ್ದಾಣದ ಯೋಜನಾ ವೆಚ್ಚ 219 ಕೋಟಿಯದ್ದಾಗಿದ್ದು, 185.89 ಕೋಟಿ ರೂ ಒಪ್ಪಂದ ವೆಚ್ಚ ಅಂದಾಜಿಸಲಾಗಿದೆ. ಕಾಮಗಾರಿಯ ಪ್ರಗತಿಯ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲಾಗುತ್ತದೆ. ಕಾಮಗಾರಿ ಒಟ್ಟು ಪ್ರಗತಿ ಶೇ.31 ರಷ್ಟು ಪೂರ್ಣಗೊಂಡಿದೆ. ಬಾಕಿಯಿರುವ ಅನುದಾನ ಹಂತ ಹಂತದಲ್ಲಿ ನೀಡಲಾಗುತ್ತದೆ. ಕಾಮಗಾರಿ ಪ್ರಗತಿಯ ಆಧಾರದ ಮೇಲೆ ಈಗ 32-33 ಕೋಟಿ ಬಿಡುಗಡೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಮನ್ನಿಕೇರಿ, ಗುತ್ತಿಗೆದಾರ ವೆಂಕಟೇಶ, ರಾಜು, ಇಂಜಿನಿಯರ ಮಹೇಶ ಇದ್ದರು.