ಖೋಖೋದಲ್ಲಿ ಮೌನೇಶ ನಾಯಕ ಸಾಧನೆ

ತುಮಕೂರಿನಲ್ಲಿ ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಮೌನೇಶ ನಾಯಕ ಉತ್ತಮ ಸರಣಿ ಕ್ರೀಡಾಪಟುವಾಗಿ ಪಾರಿತೋಷಕ ಪಡೆದುಕೊಂಡರು. ಕ್ರೀಡಾ ಇಲಾಖೆಯ ಅಧಿಕಾರಿಗಳು ಇದ್ದರು.
ತುಮಕೂರಿನಲ್ಲಿ ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಮೌನೇಶ ನಾಯಕ ಉತ್ತಮ ಸರಣಿ ಕ್ರೀಡಾಪಟುವಾಗಿ ಪಾರಿತೋಷಕ ಪಡೆದುಕೊಂಡರು. ಕ್ರೀಡಾ ಇಲಾಖೆಯ ಅಧಿಕಾರಿಗಳು ಇದ್ದರು.
Published on
ಮಸ್ಕಿ: ತಾಲೂಕಿನ ಬಳಗಾನೂರು ಗ್ರಾಮದ ಯುವಕ ಮೌನೇಶ ನಾಯಕ ಈಚೆಗೆ ತುಮಕೂರಿನಲ್ಲಿ ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಉತ್ತಮ ಸರಣಿ ಕ್ರೀಡಾಪಟುವಾಗಿ (ಬೆಸ್ಟ್ ಆಲ್‌ರೌಂಡರ್) ಸಾಧನೆ ಮಾಡಿದ್ದಾರೆ. ಬಳಗಾನೂರಿನ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಯಾದ ಮೌನೇಶ ನಾಯಕ ಮಸ್ಕಿಯ ಖೋಖೋ ಅಮೆಚೂರು ಸಂಸ್ಥೆಯಿಂದ ರಾಜ್ಯ ಅಮೆಚೂರು ಖೋಖೋ ಅಸೋಸಿಯೇಷನ್ ತಂಡಕ್ಕೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net