ಶೂನ್ಯಪೀಠಕ್ಕೆ ಇದೆ ವಿಶೇಷ ಸ್ಥಾನ

ಮಾನ್ವಿ ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಸುವರ್ಣಗಿರಿ ವಿರಕ್ತಮಠದಲ್ಲಿ ಸೋಮವಾರ ಪ್ರವಚನ ಕಾರ್ಯಕ್ರಮ ನಿಮಿತ್ತ ಒಳಬಳ್ಳಾರಿಯ ಡಾ.ಸಿದ್ಧಲಿಂಗ ಶ್ರೀಗಳು ಶೂನ್ಯ ಪೀಠಾರೋಹಣ ಮಾಡಿದರು. ಬಸವಲಿಂಗ ಶ್ರೀಗಳು, ತೋಂಟದಾರ್ಯ ಶ್ರೀಗಳು ಇದ್ದರು.
ಮಾನ್ವಿ ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಸುವರ್ಣಗಿರಿ ವಿರಕ್ತಮಠದಲ್ಲಿ ಸೋಮವಾರ ಪ್ರವಚನ ಕಾರ್ಯಕ್ರಮ ನಿಮಿತ್ತ ಒಳಬಳ್ಳಾರಿಯ ಡಾ.ಸಿದ್ಧಲಿಂಗ ಶ್ರೀಗಳು ಶೂನ್ಯ ಪೀಠಾರೋಹಣ ಮಾಡಿದರು. ಬಸವಲಿಂಗ ಶ್ರೀಗಳು, ತೋಂಟದಾರ್ಯ ಶ್ರೀಗಳು ಇದ್ದರು.
Published on
ಶೂನ್ಯಪೀಠಕ್ಕೆ ಇದೆ ವಿಶೇಷ ಸ್ಥಾನ The Shunyapith has a special place
ಮಾನ್ವಿ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಶೂನ್ಯ ಪೀಠದ ಪರಿಕಲ್ಪನೆ ನೀಡಿದರು. ಅಲ್ಲಮಪ್ರಭು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಇದರಿಂದ ಶೂನ್ಯ ಪೀಠಕ್ಕೆ ವಿಶೇಷ ಸ್ಥಾನವಿದೆ ಎಂದು ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಡಾ.ಸಿದ್ಧಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಸುವರ್ಣಗಿರಿ ವಿರಕ್ತಮಠದಲ್ಲಿ ಸೋಮವಾರ 72ನೇ ಜಾತ್ರೋತ್ಸವ ನಿಮಿತ್ತ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಶೂನ್ಯ ಪೀಠಾರೋಹಣ ಮಾಡಿ ಮಾತನಾಡಿದರು. 
ಶೂನ್ಯ ಪೀಠಾರೋಹಣ ಮಾಡಬೇಕಾದರೆ ಸಾಧಕರು ಮೊದಲು ಷಟ್‌ಸ್ಥಲಗಳಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣರಾದ ಮೇಲೆ ಐಕ್ಯ ಸ್ಥಳ ತಲುಪಿದಾಗ ಮಾತ್ರ ಶೂನ್ಯ ಪೀಠವನ್ನು ತಲುಪಲು ಸಾಧ್ಯ ಎಂದರು.
ಲಿಂ. ಚನ್ನಬಸವ ಶಿವಯೋಗಿಗಳು ಮಹಾ ತಪಸ್ವಿಗಳಾಗಿದ್ದರು. ಅವರು ನಡೆದಾಡಿದ ಸ್ಥಳಗಳೆಲ್ಲ ಪುಣ್ಯಕ್ಷೇತ್ರಗಳಾಗಿವೆ. ಶ್ರೀಕ್ಷೇತ್ರದಲ್ಲಿ ಶ್ರೀಗಳು ಕಾಶಿಯಿಂದ ತಂದ ಲಿಂಗವನ್ನು ಪ್ರತಿಷ್ಠಾಪಿಸಿ ತಪಸ್ಸಿನಿಂದ ಪಡೆದ ಶಕ್ತಿಯನ್ನು ಧಾರೆಯೆರೆಯುವ ಮೂಲಕ ಜಾಗೃತ ಕ್ಷೇತ್ರವಾಗಿಸಿದ್ದಾರೆ ಎಂದು ತಿಳಿಸಿದರು. ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಕಿರಿಯ ಶ್ರೀಗಳಾದ ಬಸವಲಿಂಗ ಸ್ವಾಮೀಜಿ, ಸುವರ್ಣಗಿರಿ ವಿರಕ್ತಮಠ ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಶ್ರೀಗಳು, ಹೊಸಪೇಟೆಯ ಸಿದ್ಧಲಿಂಗ ದೇವರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net