ಮಠ-ಮಾನ್ಯಗಳ ಸೇವೆ ಅಪಾರ

ಮುದಗಲ್ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಲಿಂಗಪ್ಪ ಹಣಗಿ, ಸುರೇಂದ್ರಗೌಡ ಪಾಟೀಲ್, ಅನಿಲ್ ಬುಶೆಟ್ಟಿ ಮತ್ತಿತರರಿದ್ದರು.
ಮುದಗಲ್ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಲಿಂಗಪ್ಪ ಹಣಗಿ, ಸುರೇಂದ್ರಗೌಡ ಪಾಟೀಲ್, ಅನಿಲ್ ಬುಶೆಟ್ಟಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶರಣ
  • ಸಂಸ್ಕೃತಿಯನ್ನು
  • ಮೆರೆಸಿರುವ
ಮುದಗಲ್: ಮಾನವ ಜನ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ನಾಣ್ಣುಡಿಯಂತೆ ಬಸವಾದಿ ಶರಣರ ಹಾದಿಯಾಗಿ ನಾಡಿನೆಲ್ಲೆಡೆ ಶರಣ ಸಂಸ್ಕೃತಿಯನ್ನು ಮೆರೆಸಿರುವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಪೂರೈಸುವ ಕಾಯಕವನ್ನು ಮಠ ಮಾನ್ಯಗಳು ನಿರಂತರವಾಗಿ ಮಾಡುತ್ತಿವೆ ಎಂದು ನಂದವಾಡಗಿ ಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣರು,ದಾರ್ಶನಿಕರು ಜೀವನದುದ್ದಕ್ಕೂ ವಚನ ಸಾಹಿತ್ಯ, ದಾಸಸಾಹಿತ್ಯದ ಮೂಲಕ ನಾಡಿನ ಉದ್ದಗಲಕ್ಕೂ ಶಾಂತಿ ಸಾರಿದ್ದಾರೆ. ಮನುಕುಲದ ಒಳಿತಿಗೆ ಪುರಾಣ ಪ್ರವಚನಗಳನ್ನು ಹೇಳುತ್ತಾ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸತ್ಕಾರ್ಯ ಕೈಗೊಂಡರು. ಭಕ್ತಿಯಿಂದ ಶಿವಧ್ಯಾನ, ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಬೆಸೆದು ಆದರ್ಶ ಜೀವನ ನಡೆಸುವಂತೆ ತಿಳಿ ಹೇಳಿದರು ಎಂದರು.
ಪ್ರಮುಖರಾದ ಸುರೇಂದ್ರಗೌಡ ಪಾಟೀಲ್, ಅನಿಲ್ ಬುಶೆಟ್ಟಿ, ಸದಾನಂದಯ್ಯ ಹಿರೇಮಠ, ಲಿಂಗಪ್ಪ ಹಣಗಿ, ಮಹೇಶ ವಸ್ತ್ರದ, ವಿಶ್ವನಾಥ ದೇಸಾಯಿ, ಅಮರೇಶ ಕಿಲ್ಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net