ಭಕ್ತರನ್ನು ಸರಿದಾರಿಯಲ್ಲಿ ಕರೆತಂದ ಶ್ರೀಗಳು

ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಠದಲ್ಲಿ ಆಯೋಜಿಸಿದ್ದ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಶಾಸಕ ಹಂಪಯ್ಯ ನಾಯಕ ಮಾತನಾಡಿದರು. ಹಾಲ್ವಿ ಮಠದ ಅಭಿನವ ಮಹಾಂತ ಸ್ವಾಮೀಜಿ, ಶ್ರೀಮಠದ ಸದಾಶಿವ ಸ್ವಾಮೀಜಿ,ಬೊಮ್ಮನಹಳ್ಳಿ ಪಟ್ಟದ ಮಠದ ಶಾಂತಮಲ್ಲ ಸ್ವಾಮೀಜಿ, ಮಾದನ ಹಿಪ್ಪರಗಿಯ ಶಿವಲಿಂಗೇಶ್ವರ ಸ್ವಾಮೀಜಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪುರಾಣ
  • ಮಹಾಮಂಗಲ
  • ಕಾರ್ಯಕ್ರಮ

ಮಾನ್ವಿ: ರುದ್ರಮುನೀಶ್ವರ ಮಠದ ವಿರೂಪಾಕ್ಷ ಸ್ವಾಮಿಗಳು ವೈರಾಗ್ಯ ನಿಧಿಗಳಾಗಿ ಶ್ರೀಮಠಕ್ಕೆ ಬರುವ ಭಕ್ತರಿಗೆ ಉತ್ತಮ ಜೀವನ ರೂಪಿಸುವ ಕೆಲಸ ಮಾಡುತ್ತಿದ್ದರು ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.

ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಠದಲ್ಲಿ ಶುಕ್ರವಾರ ಶ್ರೀ ರುದ್ರಮುನಿ ಮಹಾ ಶಿವಯೋಗಿಗಳ 98ನೇ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಶ್ರೀಮಠವನ್ನು ಕಟ್ಟಿ ಬೆಳೆಸಿ ಸುಕ್ಷೇತ್ರವನ್ನಾಗಿ ಮಾಡಿದ ಶ್ರೀಗಳ ಮಾರ್ಗದರ್ಶನದಂತೆ ತಾಲೂಕಿನ ಅಭಿವೃದ್ದಿಯನ್ನು ಮಾಡುತ್ತ ಬಂದಿದ್ದೇನೆ ಎಂದರು.
ಅಭಿನವ ಮಹಾಂತ ಸ್ವಾಮೀಜಿ ಮಾತನಾಡಿ, ಹಾಲ್ವಿ ಹಾಗೂ ಚೀಕಲಪರ್ವಿ ರುದ್ರಮುನೀಶ್ವರ ಮಠವು ಅಪರೂಪದ ಗುರು ಪರಂಪರೆಯನ್ನು ಹೊಂದಿದೆ. ಶ್ರೀಮಠದ ಶ್ರೀಗಳು ವೈರಾಗ್ಯದ ಭಾವನೆಯಿಂದ ಗುರು ಸಮರ್ಪಣೆ ಭಾವನೆಯಿಂದ ಗುರುವಿನ ಶಕ್ತಿಯನ್ನು ಪಡೆದು ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಭಕ್ತರನ್ನು ಉದ್ಧಾರ ಮಾಡುತ್ತಾ ಬಂದಿದ್ದಾರೆ ಎಂದರು.
ವಿರಕ್ತಮಠದ ಅಭಿನವಶಿವಲಿಂಗ ಸ್ವಾಮೀಜಿ, ಹರಳಹಳ್ಳಿ ಶರಣಬಸವ ದೇವರು, ಕಿಡಿಗಣ್ಣಯ್ಯಸ್ವಾಮೀಜಿ ಉಮಳಿಹೊಸೂರು, ಬಿ.ಕೆ. ಅಮರೇಶಪ್ಪ ವಕೀಲರು, ಬಸವನಗೌಡ ಶಿವಪೂಜಿ, ರೌಡೂರು ಮಹಾಂತೇಶ ಸ್ವಾಮೀಜಿ, ಚಂದ್ರಶೇಖರ, ಮಹಾಬಲೆಶ್ವರಪ್ಪಗೌಡ, ತಿಮ್ಮನಗೌಡ, ರಾಜಶೇಖರಗೌಡ ಇನ್ನಿತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net