ಸಿಂಧನೂರಿನಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸೇವಾ ಸಮಿತಿಯಿಂದ ವಿಶೇಷ ಪೂಜೆ, ದಾಸೋಹ ಕಾರ್ಯಕ್ರಮ ನಡೆಸಲಾಯಿತು.
Published on:
Copied
Follow Us
ಸಿಂಧನೂರು: ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ ಎರಡು ವರ್ಷ ಪೂರೈಸಿದ ನಿಮಿತ್ತ ನಗರದ ಬಸ್ ನಿಲ್ದಾಣ ಎದುರಿನ ಜಾಗದಲ್ಲಿ ಗುರುವಾರ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸೇವಾ ಸಮಿತಿಯಿಂದ ವಿಶೇಷ ಪೂಜೆ, ದಾಸೋಹ ಕಾರ್ಯಕ್ರಮ ನಡೆಯಿತು.
ಸಮಿತಿ ಗೌರವಾಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, 500 ವರ್ಷಗಳ ಹೋರಾಟದ ಫಲವಾಗಿ ಎರಡು ವರ್ಷದ ಹಿಂದೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಮಂದಿರ ಸ್ಥಾಪನೆಗಾಗಿ ಅನೇಕ ಹಿಂದೂಗಳು ಪ್ರಾಣ ತ್ಯಾಗ ಮಾಡಿದ್ದಾರೆ.
ಸಿಂಧನೂರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಸೇವಾ ಟ್ರಸ್ಟ್ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು, ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಲಿ ಎಂದರು.
ಸಮಿತಿಯ ಸಹ ಖಜಾಂಚಿ ನಾಗೇಶ್ ಪವಾರ್, ಕಾನೂನು ಸಲಹೆಗಾರ ಗಿರೀಶ್, ಕಾರ್ಯದರ್ಶಿ ಕೆ. ಜಗದೀಶ, ಸಹ ಕಾರ್ಯದರ್ಶಿ ರವಿಕುಮಾರ ಹಾಗೂ ಸದಸ್ಯರಾದ ಸುಖರಾಜ್, ವಿನೋದ್ ಬಾಂಡ್ಗೆ, ಸುಭಾಷ್ ಪವಾರ್, ಮನೋಹರ್ ಹಿರೇಮಠ, ವೀರೇಶ ನಾಯಕ, ಶಿವಕುಮಾರ್, ಉದಯಕುಮಾರ್ ಬೇಲ್ದಾರ್ ಇದ್ದರು.