ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಕಸರತ್ತು ತೀವ್ರ

ಇಚೇಗೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಬಣದ ಸಭೆಯಲ್ಲಿ ಮಾಜಿ ಸಚಿವ ಎನ್.ಎಸ್.ಬೋಸರಾಜು ಪುತ್ರ ರವಿ ಬೋಸರಾಜು ಭಾಗಿಯಾಗಿರುವುದು.
ಇಚೇಗೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಬಣದ ಸಭೆಯಲ್ಲಿ ಮಾಜಿ ಸಚಿವ ಎನ್.ಎಸ್.ಬೋಸರಾಜು ಪುತ್ರ ರವಿ ಬೋಸರಾಜು ಭಾಗಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಐವರ ಶಾಸಕರ ನಡುವೆ ಪೈಪೋಟಿ,
  • ಸಮುದಾಯಗಳಿಂದ ಹೈಕಮಾಂಡ್ ಮೇಲೆ ಒತ್ತಡ
  • ನಾಲ್ಕು ಜನ ಅತ್ತ , ನಾಲ್ಕು ಜನ ಇತ್ತ
ರಾಯಚೂರು ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಜಿಲ್ಲೆಯ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ದೊರಕಿಸಿಕೊಡಬೇಕೆಂಬ ಒತ್ತಾಯ ವಿವಿಧ ಸಮುದಾಯಗಳು, ಸಂಘಟನೆಗಳು ಹಾಗೂ ಬೆಂಬಲಿಗರಿಂದ ಕೇಳಿಬರುತ್ತಿದೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕ ಹಾಗೂ ಜಾತಿವಾರು ಸಾಮಾಜಿಕ ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸ್ಥಾನ ನೀಡುವ ಸೂಚನೆಗಳಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ಜನ ಶಾಸಕರ ಹೆಸರುಗಳು ಮುನ್ನೆಲೆಗೆ ಬಂದಿವೆ.
ಅಲ್ಲದೇ ತಮ್ಮದೇ ನಾಯಕನಿಗೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲೆಯಲ್ಲಿ ಬೆಂಬಲಿಗರು ಪತ್ರಿಕಾಗೋಷ್ಠಿ ,ಮೆರವಣಿಗೆ ರ‌್ಯಾಲಿ , ದೇವಸ್ಥಾನದಲ್ಲಿ ಪೂಜೆ ವಿವಿಧ ಸಂಘಟನೆಗಳ ಹರತಾಳದ ಮೂಲಕ ಹೈಕಮಾಂಡ್ ಗಮನ ಸೆಳೆಯ ಕಾರ್ಯಗಳು ನಿತ್ಯ ಜರುಗುತ್ತಲೇ ಇವೆ.
ಈ ದಿಸೆಯಲ್ಲಿ ನಾಯಕರೇನು ಕಮ್ಮಿಇಲ್ಲದಂತೆ ಮುಖ್ಯಮಂತ್ರಿಗಳು , ನಿಕಟಪೂರ್ವ ಮುಖ್ಯಮಂತ್ರಿಗಳು , ಎಐಸಿಸಿ ಅಧ್ಯಕ್ಷರಾದಿಯಾಗಿ ದೆಹಲಿಯ ನಾಯಕರ ಮನೆಗಳಿಗೆ ಭೇಟಿ ನೀಡಿ ನಮಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ಎಂದು ದಂಬಾಲು ಬೀಳುತ್ತಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಹಾಗೂ ಇನ್ನಿತರ ಮುಖಂಡರು ಬರುತ್ತಾರೆಂದರೆ ಸಾಕು ಅಲ್ಲಿಂದ ಶಾಸಕರುಗಳು ಅವರು ಬೆನ್ನಿಂದಯೇ ಸುತ್ತುತ್ತಿದ್ದಾರೆ.
ಈ ಜಟಾಪಟಿರೇಸ್‌ನಲ್ಲಿ ಮಾಜಿ ಸಚಿವರಾದ ಎನ್.ಎಸ್.ಬೋಸರಾಜು ಮುಂದಿದ್ದು ಅವರ ಪರವಾಗಿ ಹಿಂದುಳಿದ ವರ್ಗಗಳ ಸಂಘಟನೆಗಳಿಂದ ಭಾರೀ ಲಾಭಿ ನಡೆಸಿದ್ದು . ಈ ಹಿಂದೆ ಸಚಿವರಾಗಿ ಆಡಳಿತ ಅನುಭವ ಹೊಂದಿರುವ ಎನ್.ಎಸ್.ಬೋಸರಾಜು ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದರೆ ಸರ್ಕಾರದ ಕಾರ್ಯಕ್ಷಮತೆಗೆ ನೆರವಾಗಲಿದೆ ಇದರೊಂದಿಗೆ, ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನೂ ಅವರಿಗೆ ನೀಡಬೇಕೆಂದು ಬೋಸರಾಜು ಅವರ ಪುತ್ರ ರವಿ ಬೋಸರಾಜು ಲಾಭಿ ನಡೆಸಿದ್ದು , ತೆಲಂಗಾಣ ಕೈ ಸರ್ಕಾರದ ಪ್ರಮುಖರು ಕೂಡ ಕೈ ಹಿಡಿಯಬಹುದು ಎಂಬುದು ಬೆಂಬಲಿಗರ ವಾದವಾಗಿದೆ.

ಬಾದರ್ಲಿ ದ್ವಯರ ಹೆಸರು ಮುನ್ನೆಲೆಗೆ
ಸಿಂಧನೂರಿನ ಶಾಸಕರಾದ ಹಂಪನಗೌಡ ಬಾದರ್ಲಿ ಹಾಗೂ ವಿಧಾನಪರಿಷತ್ ಸದಸ್ಯ ಬಸನಗೌಡ ಬಾದರ್ಲಿಯವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ. 5 ಬಾರಿ ಶಾಸಕರಾಗಿ ಲಿಂಗಾಯತ ಸಮುದಾಯದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ದೊಡ್ಡ ಬಾದರ್ಲಿಯವರಿಗೆ ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಾರಣಕ್ಕೆ ಅವರ ಕೋಟಾದಡಿ ಸಚಿವ ಸ್ಥಾನ ಸಿಗಬಹುದು .ಒಂದು ವೇಳೆ ಕೈಕಮಾಂಡ್ ಯುವಕರಿಗೆ ಹೊಸಬರಿಗೆ ಆದ್ಯತೆ ನೀಡುವುದಾದರೆ ಡಿ.ಕೆ ಆಪ್ತ ಬಳಗದ ಮುಖ್ಯ ನಾಯಕರಾದ ಬಸವನಗೌಡ ಬಾದರ್ಲಿಗೆ ಸಚಿವ ಸ್ಥಾನ ದೊರೆಯುವುದು ಪಕ್ಕಾ ಎನ್ನುತ್ತಾರೆ ಬೆಂಬಲಿಗರು. ಒಟ್ಟಿನಲ್ಲಿ ಈ ಸಲವಾದರೂ ಸಿಂಧನೂರಿಗೆ ಒಂದು ಸಚಿವ ಸ್ಥಾನ ನೀಡಿ ಎನ್ನುತ್ತಿದ್ದಾರೆ ಬೆಂಬಲಿಗರು.

ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆಯವರ ಆಪ್ತ ಬಳಗದ ಪ್ರಮುಖ ನಾಯಕ
ಎ. ವಸಂತಕುಮಾರ್‌ಗೆ ಪರಿಶಿಷ್ಟ ಜಾತಿ ಕೋಟಾದ ನಿರೀಕ್ಷೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಲಿತ ಸಮುದಾಯದ ಸಂಘಟನೆಗಳು ಒತ್ತಾಯಿಸುತ್ತಿವೆ. ಪರಿಶಿಷ್ಟ ಜಾತಿ ಕೋಟಾದಡಿ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಸಂದರ್ಭದಲ್ಲಿ ಅವರ ಹೆಸರನ್ನು ಪರಿಗಣಿಸಬೇಕು ಎಂಬುದು ಸಂಘಟನೆಗಳ ವಾದವಾಗಿದೆ. ಸಾಮಾಜಿಕ ನ್ಯಾಯ ಹಾಗೂ ಸಮುದಾಯಗಳ ಸಮತೋಲನವನ್ನು ಕಾಂಗ್ರೆಸ್ ನಾಯಕತ್ವ ಪ್ರಮುಖ ಮಾನದಂಡವಾಗಿ ಪರಿಗಣಿಸುವ ಹಿನ್ನೆಲೆಯಲ್ಲಿ ವಸಂತಕುಮಾರ ಅವರ ಹೆಸರೂ ಚರ್ಚೆಯಲ್ಲಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
ಬಸನಗೌಡ ದದ್ದಲ್ ಪರ ವಾಲ್ಮೀಕಿ ನಾಯಕ ಸಮುದಾಯದ ಬ್ಯಾಟಿಂಗ್ ಮಾಡುತ್ತಿದ್ದು. ನಾಯಕ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು . ಅಲ್ಲದೇ ಪಕ್ಷ ಸಂಘಟನೆ ಹಾಗೂ ಭವಿಷ್ಯದ ನಾಯಕತ್ವದ ದೃಷ್ಟಿಯಿಂದ ಅವರಿಗೆ ಅವಕಾಶ ನೀಡುವ ಈ ವಿಚಾರವೂ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಹತ್ವ ಪಡೆಯುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

((ಬಾಕ್ಸ್))
ನಾಲ್ಕು ಜನ ಅತ್ತ , ನಾಲ್ಕು ಜನ ಇತ್ತ
ಜಿಲ್ಲಾ ಕಾಂಗ್ರೆಸ್ ಒಂದು ದಶಕದಿಂದ ಒಡೆದ ಮನೆಯಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಈಗಂತು ಭಿನ್ನಮತ ಮತ್ತೊಂದು ಹಂತಕ್ಕೆ ತಲುಪಿದ್ದು ಜಿಲ್ಲೆಯಲ್ಲಿ ಒಟ್ಟು 4 ಜನ ಜನರಿಂದ ಆಯ್ಕೆಯಾದವರಾದರೆ , 4 ಜನ ವಿಧಾನಸಭಾ ಪರಿಷತ್ ಮೂಲಕ ಶಾಸಕ ಸ್ಥಾನವನ್ನು ಅಲಂಕರಿಸಿದ್ದು ಇದರಲ್ಲಿ ಎನ್.ಎಸ್.ಬೋಸರಾಜು ಬಣ ಹಾಗೂ ವಿರೋಧಿ ಬಣವೆಂದು ಆಗಿದ್ದು , 4 ಜನ ಶಾಸಕರಲ್ಲಿ ಹಂಪನಗೌಡ ಬಾದರ್ಲಿ , ಬಸನಗೌಡ ದದ್ದಲ್ , ಎ.ವಸಂತಕುಮಾರ್ , ಶರಣಗೌಡ ಬಯ್ಯಪುರ ಎನ್‌ಎಸ್‌ಬಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದು, ಶತಾಯಗತಾಯ ತಮ್ಮಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿದ್ದು, ಉಳಿದಂತೆ ಎನ್‌ಎಸ್‌ಬಿ ಬಣದಲ್ಲಿ ಎಂಎಲ್ಸಿಗಳಾದ ಎನ್.ಎಸ್.ಬೋಸರಾಜು, ಬಸನಗೌಡ ಬಾದರ್ಲಿ, ಶಾಸಕರಾದ ಹಂಪಯ್ಯ ನಾಯಕ , ಬಸವನಗೌಡ ತುರುವಿಹಾಳರು ಒಂದು ಕಡೆಯಾಗಿದ್ದು ಇದರಲ್ಲಿ ಬೋಸರಾಜು ಅವರಿಗೆ ಸಚಿವ ಸ್ಥಾನ ದೊರಕಿದೆ ಸಾಕು ಎನ್ನುವಂತಾಗಿದ್ದು ಈ ಬಣ ಬಡಿದಾಟದ ನಡುವೆ ಈ ಬಾರಿಯು ಸಚಿವ ಸ್ಥಾನ ಕೈ ತಪ್ಪಬಾರದಿ ಎನ್ನುತ್ತಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net