ಗಬ್ಬೂರು ಮಹಾಶೈವ ಪೀಠದಲ್ಲಿ ಆಯೋಜಿಸಿದ್ದ ಕುಮಾರಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ‘ಸಾಹಿತ್ಯ ರತ್ನ’, ರಘುನಾಥ ರಡ್ಡಿ ಮನ್ಸಲಾಪುರ ಅವರಿಗೆ ‘ಪತ್ರಿಕಾ ಭೂಷಣ’ ಹಾಗೂ ಖಾಸಿಂ ಮಲ್ಲಿಗೆಮಡುವು ಅವರಿಗೆ ‘ಸೇವಾ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ, ಮುಖಂಡರಾದ ಡಾ.ಸಿದ್ದರಾಮ ಹೊನ್ಕಲ್, ಎಚ್.ಎಚ್.ಮೇಟಿ, ಮಲ್ಲಿಕಾರ್ಜುನ್ ಶೆಂಡಗಿ, ಬಸವರಾಜ, ಬಸವರಾಜ ಭೋಗಾವತಿ, ಮಲ್ಲಿಕಾರ್ಜುನ ದೇಸಾಯಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗಬ್ಬೂರಿನಲ್ಲಿ
ಕುಮಾರಸ್ವಾಮಿಗಳ
ಜಯಂತಿ
ದೇವದುರ್ಗ: ಲೌಕಿಕ ಬದುಕಿನ ಆಸೆ-ಆಕಾಂಕ್ಷೆಗಳನ್ನು ಮೀರಿ ಮನಸ್ಸಿನ ಪರಿಶುದ್ಧತೆಯ ಮೂಲಕ ಆತ್ಮಜ್ಞಾನದತ್ತ ಸಾಗುವುದೆ ಮಾನವ ಜನ್ಮದ ನಿಜ ಉದ್ದೇಶ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ತಿಳಿಸಿದರು.
ಗಬ್ಬೂರು ಕ್ಷೇತ್ರ ಮಹಾಶೈವ ಧರ್ಮಪೀಠದಲ್ಲಿ ಶುಕ್ರವಾರ ಮಹಾತಪಸ್ವಿ ಕುಮಾರಸ್ವಾಮಿಗಳ 117ನೇ ಜಯಂತಿ ಹಾಗೂ ಮಹಾಶೈವ ಗುರುಪೀಠದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಮನುಷ್ಯನ ಬಯಕೆಗಳು ದೇಹಕಾಮ, ಮನೋಕಾಮ ಹಾಗೂ ಆತ್ಮಕಾಮ ಎಂಬ ಮೂರು ಹಂತಗಳಲ್ಲಿ ವ್ಯಕ್ತವಾಗುತ್ತವೆ.
ಇವುಗಳನ್ನು ಮೀರಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯತ್ತ ಸಾಗಬೇಕು. ಮನಸ್ಸೇ ಬಂಧನಕ್ಕೂ ಮತ್ತು ಮುಕ್ತಿಗೂ ಕಾರಣ. ಪೂಜೆ, ಧ್ಯಾನ, ಸತ್ಸಂಗ ಹಾಗೂ ಗುರುಗಳ ಒಡನಾಟದಿಂದ ಮನಸ್ಸು ಪರಿಶುದ್ಧಗೊಳ್ಳುತ್ತದೆ ಎಂದರು.
ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ ಮಾತನಾಡಿ, ಬಸವತತ್ವವನ್ನು ದೇಶ ವಿದೇಶಗಳಲ್ಲಿ ಪಸರಿಸಿದ ಕುಮಾರಸ್ವಾಮಿಗಳು, ವಿವಿಧ ಜಾತಿ ಧರ್ಮಗಳ ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದರು. ಯುವಜನರು ಮೊಬೈಲ್ ಸಂಸ್ಕೃತಿಯಿಂದ ಹೊರಬಂದು ಪುಸ್ತಕ ಓದು, ಸತ್ಸಂಗ ಹಾಗೂ ಸಜ್ಜನರ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.