ನಾರಿಶಕ್ತಿ ವಂದನ ಕಾಯ್ದೆ ಶ್ಲಾಘನೀಯ

suguna
suguna
Published on

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕೆನ್ನುವ ಪ್ರಯತ್ನ ಸಾಕಾರವಾಗದೇ ಹೋಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಸಮಾನ ಅವಕಾಶಗಳನು ನೀಡಲು ನಾರಿಶಕ್ತಿ ವಂದನ ಕಾಯ್ದೆ ರೂಪಿಸಿ ವಿಶೇಷ ಅಧಿವೇಶನದಲ್ಲಿ ಅನುಮೋದನೆ ಪಡೆಯಲು ಮುಂದಾಗಿದ್ದಾರೆ.

ಬೇಟಿ ಬಜಾವೋ, ಬೇಟಿ ಪಡಾವೋ ಯೋಜನೆ, ಸುಕನ್ಯಾ ಸಂಮೃದ್ಧಿ, ಮಾತೃವಂದನಾ ಪೋಷಣಾ ಅಭಿಯಾನ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮುದ್ರಾ ಯೋಜನೆಯ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲಾಗಿದೆ. ಲಖ್ ಪಟ್ಟಿ, ನಮೋ ಡೋನ್ ಯೋಜನೆಗಳಿಗೆ ಮಹಿಳಯರಿಗೆ ತರಬೇತಿ ನೀಡಿ ತಂತ್ರಜ್ಞಾನ, ಉದ್ಯಮಶೀಲತೆಯನ್ನು ಒದಗಿಸಲಾಗುತ್ತಿದೆ. 2047 ಗುರಿಯೊಂದಿಗೆ ದೇಶವನ್ನು ಜಗತ್ತಿನಲ್ಲಿಯೇ ನಂಬರ್ ಒನ್ ಸ್ಥಾನಕ್ಕೆ ತಂದು ನಿಲ್ಲಿಸುವ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಎಲ್ಲ ಮಹಿಳೆಯರು ಬೆಂಬಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸುಮಾ ಅಶೋಕ ಗಸ್ತಿ, ಆಶ್ವಿನಿ, ಆದಿಲಕ್ಷ್ಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net