ಕವಿತಾಳ: ಪಪಂ ಸಾಮಾನ್ಯ ಸಭೆಯಲ್ಲಿ ಸೋಮವಾರ 5ನೇ ವಾರ್ಡಿನ ರುಕ್ಮುದ್ದೀನ್ ಮತ್ತು ನಾಮನಿರ್ದೇಶಿತ ಸದಸ್ಯರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ನಮ್ಮ ವಾರ್ಡಿನ ಸಮಸ್ಯೆಗಳನ್ನು ಹೇಳಲು ಅವಕಾಶ ನೀಡಬೇಕೆಂದು ರುಕ್ಮುದ್ದೀನ್ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಅಧ್ಯಕ್ಷೆ ರಾಜೇಶ್ವರಿ ತಿಪ್ಪಯ್ಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮುಖ್ಯಧಿಕಾರಿ ಜಸ್ಪಾಲ್ ಸಿಂಗ್ ಮಾತನಾಡಿ, ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ತಿಳಿಸಬೇಕು ಎಂದು ಕೋರಿದರು. ಬೀದಿ ದೀಪ, ರಸ್ತೆ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಇತರ ಮೂಲ ಸವಲತ್ತುಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ರುಕ್ಮುದ್ದಿನ್ ಸಮಸ್ಯೆಗಳನ್ನು ಪ್ರಸ್ತಾಪಿಸುವಾಗ ನಾಮನಿರ್ದೇಶಿತ ಸದಸ್ಯ ಮಧ್ಯೆ ಪ್ರವೇಶ ಮಾಡಿದ್ದರಿಂದ ವಾಗ್ವಾದ ನಡೆಯಿತು. ವಾರ್ಡಿನ ಸಮಸ್ಯೆಗಳನ್ನು ಪರಿಹರಿಸುವವರೆಗೆ ನೆಲದ ಮೇಲೆ ಕುಳಿತು ಹೋರಾಟ ಮಾಡುವುದಾಗಿ ಪಟ್ಟು ಹಿಡಿದರು. ಪ್ರಮುಖರ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ನೀಡಿದ ಬಳಿಕ ರುಕ್ಮುದ್ದೀನ್ ಹೋರಾಟ ಕೈಬಿಟ್ಟರು. ಉಪಾಧ್ಯಕ್ಷೆ ಎಲೀಜಾ ಓವಣ್ಣ, ಮಲ್ಲಿಕಾರ್ಜುನ ಗೌಡ, ಲಿಂಗರಾಜ ಕಂದಗಲ್, ಯಲ್ಲಪ್ಪ ಮಾಡಗೇರ ಇದ್ದರು.