ಕಲಶ ಮೆರವಣಿಗೆ ಅದ್ದೂರಿ

ಗುರುಗುಂಟಾದಲ್ಲಿ ಆಂಜನೇಯ ಹಾಗು ಕಾಶಿ ವಿಶ್ವನಾಥ ದೇವರ ಕಲಶ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ-ಕಳಸದೊಂದಿಗೆ ಭಾಗವಹಿಸಿದ್ದರು.
ಗುರುಗುಂಟಾದಲ್ಲಿ ಆಂಜನೇಯ ಹಾಗು ಕಾಶಿ ವಿಶ್ವನಾಥ ದೇವರ ಕಲಶ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ-ಕಳಸದೊಂದಿಗೆ ಭಾಗವಹಿಸಿದ್ದರು.
Published on
ಗುರುಗುಂಟಾ: ಮೊಮೀನ್ ಗಲ್ಲಿಯಲ್ಲಿ ಆಂಜನೇಯ ಹಾಗು ಕಾಶಿ ವಿಶ್ವನಾಥ ದೇವರ ಕಲಶ ಮೆರವಣಿಗೆ ಸೋಮವಾರ ಅದ್ದೂರಿಯಾಗಿ ಜರುಗಿತು.
ಅಮರೇಶ್ವರ ಗುಡಿಯಿಂದ ಕಲಶಗಳನ್ನು ಸುಮಂಗಲೆಯರ ಕುಂಭ- ಕಳಸ, ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಪೂಜೆ ಬಳಿಕ ಕಲಶಾರೋಹಣ ನಡೆಯಿತು. ಬ್ರಾಹ್ಮಿ ಮುಹೂರ್ತದಲ್ಲಿ ಹನುಮಂತ ಮೂರ್ತಿ ಹಾಗೂ ಕಾಶಿ ವಿಶ್ವನಾಥ ಲಿಂಗಕ್ಕೆ ವಿಶೇಷ ಪೂಜೆಗಳೊಂದಿಗೆ ಅಭಿಷೇಕ ನಡೆಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೃಷ್ಣಶೆಟ್ಟಿ ಕಿನ್ನಾಳ, ಅಜಯ ಹಡಪದ ಎಚ್.ಜಿ.ಎಂ, ಅಮರೇಶ ದೇವಣ್ಣಶೆಟ್ಟಿ, ಸಂಗಮೇಶ ಪಟ್ಟಣಶೆಟ್ಟಿ, ಶರಣಬಸವ ಪಟ್ಟಣಶೆಟ್ಟಿ, ವಿಶ್ವನಾಥ್ ಶೆಟ್ಟಿ, ಹನುಮೇಶ ಬಳಿಗೇರ್, ರಾಮಣ್ಣ ಹುಣಿಸಿಗಿಡ, ನಾಗಪ್ಪ ಪುಣೆದರ್, ರಂಗಪ್ಪ, ಆದೇಶ ಹಡಪದ, ಸಂತೋಷ ಹಡಪದ, ದುರುಗೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net