ಸಂತ ಸೇವಾಲಾಲ್ ಮಹಾರಾಜರ ಆದರ್ಶ ಪಾಲಿಸಿ

ಮಾನ್ವಿ ತಾಲೂಕಿನ ಮುರಹರಪುರ ತಾಂಡದಲ್ಲಿ ಮಾತಾಶ್ರೀ ಜಗದಾಂಬಾ ಮರಿಯಮ್ಮ ದೇವಿ ಹಾಗೂ ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನ ಪ್ರಾರಂಭೋತ್ಸದ ನಿಮಿತ್ತ ನಡೆದ ಹೋಮಕ್ಕೆ ಗಬ್ಬೂರುವಾಡಿ ಬಳಿರಾಮ್ ಮಹಾರಾಜರು ಪೂರ್ಣಹುತಿ ನೀಡಿದರು. ಪ್ರಮುಖರಾದ ಶಿವನಗೌಡ, ಗುಮ್ಮ ಬಸವರಾಜ ವಕೀಲರು, ಚನ್ನಪ್ಪಗೌಡ ಇತರರಿದ್ದರು.
ಮಾನ್ವಿ ತಾಲೂಕಿನ ಮುರಹರಪುರ ತಾಂಡದಲ್ಲಿ ಮಾತಾಶ್ರೀ ಜಗದಾಂಬಾ ಮರಿಯಮ್ಮ ದೇವಿ ಹಾಗೂ ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನ ಪ್ರಾರಂಭೋತ್ಸದ ನಿಮಿತ್ತ ನಡೆದ ಹೋಮಕ್ಕೆ ಗಬ್ಬೂರುವಾಡಿ ಬಳಿರಾಮ್ ಮಹಾರಾಜರು ಪೂರ್ಣಹುತಿ ನೀಡಿದರು. ಪ್ರಮುಖರಾದ ಶಿವನಗೌಡ, ಗುಮ್ಮ ಬಸವರಾಜ ವಕೀಲರು, ಚನ್ನಪ್ಪಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆದರ್ಶ ಪಾಲಿಸಿ

ಸಂತ ಸೇವಾಲಾಲ್ ಮಹಾರಾಜರ ಆದರ್ಶ ಪಾಲಿಸಿ

ಮಾನ್ವಿ: ಸಂತ ಸೇವಲಾಲ್ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಿದರೆ ಸಮಾಜದ ಏಳಿಗೆ ಸಾಧ್ಯ ಎಂದು ಕಲಬುರ್ಗಿ ಗಬ್ಬೂರುವಾಡಿ ಬಳಿರಾಮ್ ಮಹಾರಾಜ ಹೇಳಿದರು.

ತಾಲೂಕಿನ ಮುರಹರಪುರ ತಾಂಡದಲ್ಲಿ ಮಂಗಳವಾರ ಮಾತಾಶ್ರಿ ಜಗದಾಂಬಾ ಮರಿಯಮ್ಮ ದೇವಿ, ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿದಿನ ಜಗದಾಂಬಾ ಮರಿಯಮ್ಮ ದೇವಿ ಹಾಗೂ ಸಂತ ಸೇವಾಲಾಲ್ ಮಹಾರಾಜರಿಗೆ ಪೂಜೆ ಸಲ್ಲಿಸುವುದರಿಂದ ಇಷ್ಟಾರ್ಥ ನೆರವೇರುತ್ತವೆ. ದುಶ್ಚಟ ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜ ಸಂಘಟನೆ ಮಾಡಬೇಕು. ಸಂಘಟನೆಯಿಂದ ಅಭಿವೃದ್ಧಿ ಸಾಧ್ಯ ಎಂದರು.
ಕಲ್ಮಠ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ದೇವಸ್ಥಾನ ಉದ್ಘಾಟಿಸಿದರು. ಜಗದಾಂಬಾ ಮರಿಯಮ್ಮ ದೇವಿ ಹಾಗೂ ಸಂತ ಸೇವಾಲಾಲ್ ಮಹಾರಾಜರ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ, ವಾಸ್ತುಹೋಮ ಸೇರಿ ವಿವಿಧ ಹೋಮಗಳಿಗೆ ಪೂರ್ಣಹುತಿ ಸಮರ್ಪಿಸಿದರು.
ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್, ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಪಾಟೀಲ್, ರಾಜ್ಯ ಬಂಜಾರ ಸೇವಾ ಸಂಘದ ಉಪಾಧ್ಯಕ್ಷರಾದ ಗೋವಿಂದರಾಜ ವಕೀಲರು, ರಾಜ್ಯ ಸಂಚಾಲಕ ಮೌನೇಶ ವಕೀಲರು, ತಾಲೂಕು ಅಧ್ಯಕ್ಷ ಗೋವಿಂದ ಗುತ್ತೇದಾರರು. ಪ್ರಮುಖರಾದ ರಾಜಾ ಶ್ಯಾಮಸುಂದರ ನಾಯಕ, ಯಂಕಪ್ಪ ಕಾರಬಾರಿ, ವೆಂಕಪ್ಪ ಪವಾರ್, ಶಿವನಗೌಡ, ಗುಮ್ಮ ಬಸವರಾಜ ವಕೀಲರು, ಚನ್ನಪ್ಪಗೌಡ, ಕರಿಯಪ್ಪ, ಮುಸ್ತಾಫ ಸಾಹುಕಾರ್ ಕಪಗಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net