ಹೈಕಮಾಂಡ್ ಸೂಚಿಸುವವರೆ ನಮಗೆ ಸಿಎಂ

ಗ್ರಾಮೀಣ ಶಾಸಕ ಬಸನಗೌಡ ದದ್ದಲ್
ಗ್ರಾಮೀಣ ಶಾಸಕ ಬಸನಗೌಡ ದದ್ದಲ್
Published on
ರಾಯಚೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡುವ ಬಗ್ಗೆ ನಮಗೆ ಇದುವರೆಗೆಯಾವುದೇ ವಿಷಯ ತಿಳಿದಿಲ್ಲ. ದೆಹಲಿಯಲ್ಲಿ ಏನು ಚರ್ಚೆಯಾಗಿದೆಂದು ಯಾರೂ ಅಧಿಕೃತವಾಗಿ ನಮಗೆ ಹೇಳಿಲ್ಲವೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ 130 ವರ್ಷ ಇತಿಹಾಸವಿದೆ. ಪಕ್ಷದ ವರಿಷ್ಠರು ,ಹೈಕಮಾಂಡ್ ಹಂತದಲ್ಲೇ ನಿರ್ಣಯ ಪ್ರಕ್ರಿಯೆ ನಡೆಯುತ್ತದೆ. ಅಧಿಕೃತವಾಗಿ ಘೋಷಣೆ ಮಾಡಿದಾಗ ಎಲ್ಲಾ ವಿಚಾರ ಗೊತ್ತಾಗುತ್ತದೆ. ಹೈಕಮಾಂಡ್ ಆದೇಶಕ್ಕೆ ನಾವು 140 ಶಾಸಕರು ಬದ್ದರಾಗಿರುತ್ತೇವೆ ಎಂದರು.
ರಾಹುಲ್ ಗಾಂಧಿ , ಖರ್ಗೆ ಸೇರಿ ಹೈಕಮಾಂಡ್ ನಾಯಕರು ನಿರ್ಣಯ ಮಾಡುತ್ತಾರೆ. ನಾಲ್ಕು ಡಿಸಿಎಂ ಕೊಡುವ ಬಗ್ಗೆ ಅಲ್ಲಿ ಏನು ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ದಲಿತ ಸಿಎಂ ಪ್ರಶ್ನೆ ಬಗ್ಗೆಯೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದವಾಗಿದ್ದೇವೆ. ಡಿಕೆಶಿ ಅಭಿಮಾನಿಗಳು ಅವರೇ ಸಿಎಂ ಅಂತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ ಅಭಿಮಾನಿಗಳು ಕೇಳುವುದು ಸಹಜ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ.

ನಮಗೆ ಬೆಂಗಳೂರಿಗೆ ಬರಲು ಇದುವರೆಗೆ ಯಾವುದೇ ಸೂಚನೆ ಬಂದಿಲ್ಲ. ಸುರ್ಜೆವಾಲ್ , ಕೆ.ಸಿ.ವೇಣುಗೋಪಾಲ ಎಸ್‌ಐಆರ್, ಸ್ಥಳೀಯ ಚುನಾವಣೆ ಬಗ್ಗೆ ಸಭೆ ಮಾಡುತ್ತಾರೆ. ಆದರೆ ಯಾರು ಕರೆದಿಲ್ಲ. ಸಚಿವ ಸಂಪುಟ ವಿಸ್ತರಣೆಯಾದರೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಬೇಡಿಕೆಯಿದೆ.
ಯಾರು ಸನ್ಯಾಸಿ ಇಲ್ಲಾ ಖಂಡಿತವಾಗಿ ಅವಕಾಶ ಬಂದಾಗ ತೆಗೆದುಕೊಳ್ಳುತ್ತೇವೆ. ವಯಕ್ತಿಕವಾಗಿ ಸಚಿವ ಸ್ಥಾನ ಕೇಳುತ್ತಿಲ್ಲ ಜಿಲ್ಲೆಗೆ ಕೇಳುತ್ತಿದ್ದೇವೆ. 15 ಎಸ್‌ಟಿ ಮೀಸಲಾತಿ ಕ್ಷೇತ್ರದಲ್ಲಿ 14 ಗೆದ್ದಿದ್ದೇವೆ ಇನ್ನೂ ಎರಡು ಸಚಿವ ಸ್ಥಾನ ಕೇಳುತ್ತಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net