

ಪ್ರಮುಖ ಮುಖ್ಯಾಂಶಗಳು
ತಾಲೂಕಿನ ಕಸಬಾ ಲಿಂಗಸುಗೂರಿನಲ್ಲಿ ಶ್ರೀ ಕುಪ್ಪಿ ಭೀಮದೇವರ ಮಹಾ ರಥೋತ್ಸವ ಗುರುವಾರ ಸಂಜೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆಯಿಂದ ಶ್ರೀ ಕುಪ್ಪಿ ಭೀಮದೇವರ ಅರ್ಚಕರಿಂದ ವಿವಿಧ ಪೂಜೆಗಳು ಜರುಗಿದವು. ಶತಮಾನೋತ್ಸವದ ರಥೋತ್ಸವ ಅಂಗವಾಗಿ ಭಕ್ತರಿಂದ ಹೆಲಿಕಾಪ್ಟರ್ ನಿಂದ ಪುಷ್ಪ ವೃಷ್ಠಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ್,ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಾಪುರು,ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ, ಪ್ರೊ.ಅಮರೇಶ ಯತಗಲ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್,ಟಿಎಪಿಎಂಸಿ ಅಧ್ಯಕ್ಷ ಶಶಿಧರ ಪಾಟೀಲ್,ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ,ಶಿರಿಮಲ್ಲನಗೌಡ, ಬಸವಂತರಾಯ ಕುರಿ,ಬಸವರಾಜ, ಚಣ್ಣಗೌಡ ಬಿರಾದಾರ ಸೇರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.