ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಸಿಐಟಿಯು ಒತ್ತಾಯ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ಸಿಐಟಿಯು ಸಂಘಟನೆಯಿಂದ ಮಂಗಳವಾರ ರಾಯಚೂರಿನ ಟಿಪ್ಪು ಸುಲ್ತಾನ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಪ್ರಮುಖರಾದ ಕೆಜಿ ವೀರೇಶ, ವರಲಕ್ಷ್ಮೀ, ಚಂದ್ರಕಲಾ, ಶರಣಮ್ಮ, ಪದ್ಮಾವತಿ, ನಿರ್ಮಲಾ, ರೆಹಮತ್, ಜಿಲಾನಿಪಾಷಾ, ಅಮರೇಶ, ಗುರುರಾಜ, ಬಸವರಾಜ, ಪ್ರಭು, ಶಿವರಾಜ, ಅಶೋಕ, ಶಿವಮೂರ್ತಿ, ಬಸವರಾಜ ಸ್ವಾಮಿ, ಶರಣಗೌಡ, ಸಂತೋಷ ಇದ್ದರು.
Published on:
Copied
Follow Us
ರಾಯಚೂರು
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ಸಿಐಟಿಯು ಸಂಘಟನೆಯಿಂದ ಮಂಗಳವಾರ ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಾವಳಿ ಅಧಿಸೂಚನೆಗಳ ಪ್ರತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳುವ ಉದ್ದೇಶದಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಡಿಎಸ್.ಶರಣ ಬಸವ ಮಾತನಾಡಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಡೆಗಣಿಸಿ 2025ರ ನವೆಂಬರ್ 21ರಂದು ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಅಂತಿಮ ಪ್ರಕಟಣೆ ಹೊರಡಿಸಿತ್ತು. ನಂತರ ಮೇ 8ರಂದು ಈ ಸಂಹಿತೆಗಳ ನಿಯಮಾವಳಿಗಳನ್ನು ಅಂತಿಮಗೊಳಿಸಿ ಜಾರಿಗೆ ತಂದಿದೆ ಎಂದು ಟೀಕಿಸಿದರು.
ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಪರಿಗಣಿಸದೇ ಸರ್ಕಾರ ಏಕಪಕ್ಷೀಯವಾಗಿ ಕ್ರಮ ಕೈಗೊಂಡಿದೆ. ಬಂಡವಾ ಳಶಾಹಿಗಳ ಹಿತಾಸಕ್ತಿಗಾಗಿ ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
2019ರಲ್ಲಿ ವೇತನ ಸಂಹಿತೆ ಜಾರಿಯಾದ ಬಳಿಕದಿಂದಲೇ ದೇಶಾದ್ಯಂತ ಕಾರ್ಮಿಕ ಸಂಘಟ ನೆಗಳು ನಿರಂತರ ಹೋರಾಟ ನಡೆಸುತ್ತಿವೆ. 2020ರ ಜನವರಿಯಲ್ಲಿ ಅಖಿಲ ಭಾರತ ಮುಷ್ಕರ, 2020ರ ನವೆಂಬರ್ 26ರಂದು ಐತಿಹಾಸಿಕ ಸಾರ್ವತ್ರಿಕ ಮುಷ್ಕರ, 2025ರ ಜುಲೈ 6ರಂದು ನಡೆದ ಸಾರ್ವತ್ರಿಕ ಮುಷ್ಕರ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಕೋಟ್ಯಂತರ ಕಾರ್ಮಿಕರು ಭಾಗವಹಿಸಿದ್ದರು. ಈ ಕಾರ್ಮಿಕ ಸಂಹಿತೆಗಳು ಖಾಯಂ ಉದ್ಯೋಗದ ಅವಕಾಶಗಳನ್ನು ಕಡಿಮೆ ಮಾಡಲಿದ್ದು, ಕಾರ್ಮಿಕರ ಮೂಲಭೂತ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಕಸಿದುಕೊಳ್ಳುವಂತಿವೆ ಎಂದು ದೂರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆಜಿ ವೀರೇಶ, ವರಲಕ್ಷ್ಮೀ, ಚಂದ್ರಕಲಾ, ಶರಣಮ್ಮ, ಪದ್ಮಾವತಿ, ನಿರ್ಮಲಾ, ರೆಹಮತ್, ಜಿಲಾನಿಪಾಷಾ, ಅಮರೇಶ, ಗುರುರಾಜ, ಬಸವರಾಜ, ಪ್ರಭು, ಶಿವರಾಜ, ಅಶೋಕ, ಶಿವಮೂರ್ತಿ, ಬಸವರಾಜ ಸ್ವಾಮಿ, ಶರಣಗೌಡ, ಸಂತೋಷ, ಮಲ್ಲಿಕಾರ್ಜುನ, ನಾಗಲಿಂಗಯ್ಯ ಸೇರಿದಂತೆ ಅನೇಕರು ಇದ್ದರು.