ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ವೆಯರ್‌ಗಳು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಮಾಡುತ್ತಿದ್ದಾರೆ. ರೈತರ ವಿವಿಧ ಕಾರ್ಯಗಳು ಸ್ಥಗಿತಗೊಂಡಿವೆ. ಜಿಲ್ಲೆಯೊಂದರಲ್ಲಿಯೇ ಸರಿ ಸುಮಾರು 20 ಸಾವಿರ ಅರ್ಜಿಗಳು ರೈತರು ಸಲ್ಲಿಸಿದ್ದಾರೆ. ರಾಜ್ಯಾದಂತ ಲಕ್ಷಾಂತರ ಅರ್ಜಿಗಳು ಭಾಗಿ ಉಳಿದಿವೆ. ಪೋಡಿ, ದಾಖಲೆ ಬದಲು ಸರ್ವೆ ಕಾರ್ಯ ನಡೆಯದೇ ತೀವ್ರ ತೊಂದರ ಅನುಭವಿಸುತ್ತಿದ್ದಾರೆ. ಕೂಡಲೇ ಸಮಸ್ಯೆ ಪರಿಹಾರ ಒದಗಿಸಬೇಕು.