ಸರ್ಕಾರ ಜಿಲ್ಲೆಯಲ್ಲಿನ ಕೆರೆಗಳ ಸಂರಕ್ಷಣೆ ಮಾಡಲಿ

S.B.PATIL
S.B.PATIL
Published on
ರಾಯಚೂರು ಜಿಲ್ಲೆಯ ಕೆರೆಗಳ ಸಂರಕ್ಷಣೆಯಲ್ಲಿ ಕೆರೆ ಬಳಕೆದಾರರ ಸಂಘಗಳನ್ನು ತೊಡಗಿಸಲು ರಾಜ್ಯ ಸರ್ಕಾರ 2023 ರಲ್ಲಲಿ ಆದೇಶ ನೀಡಿದ್ದು ಕೇವಲ ದಾಖಲೆಗೆ ಮಾತ್ರ ಸೀಮಿತವಾಗಿದೆ ಆದರೆ ಯಾವುದೇ ಕಾರ್ಯ ರೂಪಕ್ಕೆ ಬಂದಿಲ್ಲವೆಂದು ಜಿಲ್ಲೆ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಬಿ.ಪಾಟೀಲ್ ಅಸಮಾದಾನ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಾಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿರುವ ಕೆರೆಗಳು ಒತ್ತುವರಿಯಾಗಿ ಕೆರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಲಿವೆ. ತಾಲೂಕಿನ ವೈ. ಮಲ್ಲಾಪುರು ಕೆರೆ 15 ಎಕರೆ ಇದ್ದು ಈಗ ಕೇವಲಮೂರು ಎಕರೆ ಮಾತ್ರ ಉಳಿದಿದೆ. ಹೂಳೆತ್ತುವ ಕಾಮಗಾರಿಯಲ್ಲಿ ಹೂಳು ತೆಗೆದು ಕೆರೆಯಲ್ಲಿಯೇ ಹಾಕಾಗುತ್ತಿದೆ. ಉದ್ದೇಶಪೂರಕವಾಗಿ ಕೆರೆಗಳನ್ನು ಒತ್ತುವರಿ ಮಾಡಲಾಗುತ್ತಿದೆ.
ಕೂಡಲೇ ಜಿಲ್ಲಾಧಿಕಾರಿಗಳು ಕೆರೆಗಳ ಗುರುತು ಮಾಡಿ ಜಿಯೋ ಫಿನ್ಸಿಂಗ್ ಮಾಡಬೇಕು, ಕೆರೆಗಳ ಬಳಿ ನಾಮಫಲಕ ಅಳವಡಿಸಿ ಕೆರೆಯ ಮಾಲೀಕತ್ವ, ನಿಖರ ವಿಸ್ತೀರ್ಣ, ಅನುದಾನ ವಿವರನ್ನು ಪ್ರಕಟಿಸಬೇಕು. ಜಿಲ್ಲೆಯ ಕೆರೆಗಳನ್ನು ಹೂಳೆತ್ತಿಸಿ ನೀರು ತುಂಬುವ ಕಾರ್ಯ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನರಸಿಂಗರಾವ್, ಬೂದಯ್ಯು ಸ್ವಾಮಿ, ಆಂಜಿನೇಯ್ಯ, ಮಲ್ಲಮ್ಮ, ರೇಣಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net