ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆ ಮುಂದಾಗಿರುವದರಿಂದ ವ್ಯಾರಂಟಿ ಕಳೆದುಕೊಳ್ಳುವಂತಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಕಾರ್ಯಕಾರಿ ಸದಸ್ಯ ಅಕ್ಬರ್ ಹುಸೇನ ನಾಗುಂಡಿ ಟೀಕಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗಳ ಘೋಷಣೆ ಮಾಡುವಾಗ ಯಾವುದೇ ಪರಿಷ್ಕರಣೆ ಮಾಡದೆ ಇವಾಗ ಮಾಡಲು ಮುಂದಾಗಿರುವುದು ವಿಷದನೀಯವಾಗಿದೆ. ಪ್ರತಿ ಕುಟುಂಬಕ್ಕೆ 32 ಸಾವಿರ ವಾರ್ಷಿಕ ಆದಾಯ ಮಿತಿ ನಿಗಧಿಪಸಿರುವದು ಅಸಮಂಜಸ ನಿರ್ಧಾರವಾಗಿದೆ. ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸುವದಾಗಿ ಹೇಳುವ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾತ್ರ 32 ಸಾವಿರ ರೂನಿಗಧಿ ಮಾಡಿರುವದು ನೂರಾರು ಜನ ಫಲಾನುಭವಿಗಳನ್ನು ಯೋಜನೆಗಳಿಂದ ಹೊರಗುಳಿಸುವಂತೆ ಮಾಡುವ ಹುನ್ನಾರವಾಗಿದೆ ಎಂದರು.
ಸತ್ತವರು, ಅನರ್ಹರ ಪತ್ತೆಗೆ ಪರಿಷ್ಕರಣೆ ಮಾಡುವದಾಗಿ ಹೇಳುವಾಗ ಈಗಾಗಲೇ ಸರ್ಕಾರಕ್ಕೆ ಫಲಾನುಭವಿಗಳು ಎಲ್ಲಾ ದಾಖಲೆ ನೀಡಿಯಾಗಿದೆ. ಆದರೆ ಅದರೀಗ ಮತ್ತೆ ಹಳೆ ದಾಖಲೆ ನೀಡಲು ಹೋದರೆ ಅನೇಕ ಷರತ್‌ಗಳು ನಿಯಮಗಳನ್ನು ಹೇಳಿ ಯೋಜನೆಗಳಿಂದ ಹೊರಗುಳಿಯುವಂತೆ ಮಾಡಲಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಸಹ ಇಲ್ಲಿಯವರಗೆ ವೃದ್ಯಾಪ್ಯ, ವಿಧವಾ ವೇತನ ಸೇರಿ ಸರ್ಕಾರ ಯೋಜನೆಗಳ ಲಾಭ ಪಡೆದರೂ ಈಗ ಯೋಜನೆಗಳ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಗೃಹ ಲಕ್ಷ್ಮಿ, ಶಕ್ತಿ, ಯುವನಿಧಿ, ಗೃಹ ಜ್ಯೋತಿ ಯೋಜನೆಗಳ ಫಲಾನುಭವಿಗಳು ದಾಖಲೆ ಪಡೆಯಲು ಸಾಹಸ ಮಾಡಬೇಕಾದ ಸ್ಥಿತಿಗೆ ಡಿ.ಕೆ.ಶಿವುಕುಮಾರ ಇವರೇ ಕಾರಣವಾಗಿದ್ದಾರೆ. ಈಗಾಗಲೇ ಯೋಜನೆ ಲಾಭ ಪಡೆಯುತ್ತಿರುವ ಅರ್ಹರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕಿದೆ. ಬಾಕಿಯಿರುವ ಹಣವನ್ನು ಫಲಾನುಭವಿಗಳಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸೈಯಾದ್ ಇರ್ಫನ್,ನಜೀರ್, ಗೌಸ್ ಮೊಹೀನ್ ಇದ್ದರು.