ಜಗನ್ನಾಥ ದಾಸರಿಗೆ ಫಲ ಪಂಚಾಮೃತ ಸೇವೆ

ಮಾನ್ವಿ ಜಗನ್ನಾಥ ದಾಸರ ಸನ್ನಿಧಾನದಲ್ಲಿ ಮಧ್ವಾಚಾರ್ಯರ 710 ನೇ  ಜಯಂತಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ಮಾನ್ವಿ ಜಗನ್ನಾಥ ದಾಸರ ಸನ್ನಿಧಾನದಲ್ಲಿ ಮಧ್ವಾಚಾರ್ಯರ 710 ನೇ ಜಯಂತಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
Published on
ಮಾನ್ವಿ: ಪಟ್ಟಣದ ಜಗನ್ನಾಥ ದಾಸರ ಸನ್ನಿಧಾನದಲ್ಲಿ ಶ್ರೀಮನ್ ಮಧ್ವಾಚಾರ್ಯರ 710 ನೇ ಜಯಂತಿ ಅಂಗವಾಗಿ ಮಧ್ವನವಮಿಯನ್ನು ಭಕ್ತಿಯಿಂದ ಆಚರಿಸಲಾಯಿತು.
ಬೆಳಗ್ಗೆ 5 ಕ್ಕೆ ಸುಪ್ರಭಾತ, ಹರಿಕಥಾಮೃತಸಾರ ಪಾರಾಯಣ, ಪವಮಾನ ಹೋಮ, ರಾಯರ ಅಷ್ಟೋತ್ತರ, ಜಗನ್ನಾಥ ದಾಸರ ಕಂಬ ಸ್ಥಂಭಕ್ಕೆ ನಿರ್ಮಾಲ್ಯ ವಿಸರ್ಜನೆ, ಪ್ರತಿಮಾ ಪೂಜೆ ಮತ್ತು ಫಲ ಪಂಚಾಮೃತ ಸೇವೆ ಅಷ್ಟೋತ್ತರ ನೆರವೇರಿಸಲಾಯಿತು. ಮಧ್ವಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ರಾಜಬೀದಿಯಲ್ಲಿ ದಾಸಾರ್ಯ ಮಹಿಳಾ ಭಜನೆ ಮಂಡಳಿ ಹಾಗೂ ಪವನ ಭಜನಾ ಮಂಡಳಿಗಳಿಂದ ತಾರತಮ್ಯ ಭಜನೆಯೊಂದಿಗೆ ಪಲ್ಲಕ್ಕಿ ಮಧ್ವಾಚಾರ್ಯರ ಭಾವಚಿತ್ರ ಸರ್ವ ಮೂಲ ಗ್ರಂಥಗಳ ಮೆರವಣಿಗೆ ನಡೆಯಿತು.
ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಮುದ್ದುರಂಗರಾವ ಮುತಾಲಿಕ, ಪ್ರಮುಖರಾದ ಟಿ.ಭೀಮಸೇನರಾವ, ನರಸಿಂಹಾಚಾರ್ಯ ಜಾನೇಕಲ್, ಜಗನ್ನಾಥ ರಾಮಪೂರ, ಶ್ರೀಧರ ಮಾಸ್ಟರ್, ನರಸಿಂಹ ಅಪೂಟ್, ಪ್ರಲ್ಹಾದ, ಜಯಚಾರ್ಯ ಮಠದ್, ಗೋಪಾಲ ಕಿರಸೂರ, ಜಗನ್ನಾಥ ಪುರೋಹಿತ, ಗಿರೀಶ ತುರ್ವಿಹಾಳ, ಮ್ಯಾನೇಜರ ಶ್ರೀನಿವಾಸರಾವ್ ಕೊರ್ಲಹಳ್ಳಿ, ಅರ್ಚಕ ಪ್ರಲ್ಹಾದಾಚಾರ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net