ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ಡಾ.ಎಂ.ಬಸವರಾಜ ಅವರ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನಗಳು ಎಂದರೆ ಪ್ರಮಾಣ, ಪ್ರಮಾಣ ಎಂದರೆ ಸತ್ಯ, ಸತ್ಯದಂತೆ ಬದುಕುವುದು, ಸಕಲ ಜೀವರಾಶಿಗಳನ್ನು ದಯೆ, ಕರುಣೆ, ವಾತ್ಸಲ್ಯದಿಂದ ಪ್ರೀತಿಸುವುದೇ ನಿಜವಾದ ಧರ್ಮವಾಗಿದೆ ಎಂದರು.